ETV Bharat / state

ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಯುವಕರಿಂದ ಕೊರೊನಾ ಸ್ಯಾಂಪಲ್​ ಸಂಗ್ರಹಿಸುವ ಯುನಿಟ್​​ ಕೊಡುಗೆ - ಮುಖ್ಯ ವೈದ್ಯಾಧಿಕಾರಿ ಡಾ.ಈಶ್ವರ ಸವುಡಿ

ಅಂದಾಜು 30 ಸಾವಿರ ರೂಪಾಯಿ ಮೌಲ್ಯದ ಕೊರೊನಾ ಸೋಂಕಿನ ಗಂಟಲು ದ್ರವ ಸ್ಯಾಂಪಲ್ ಸಂಗ್ರಹಿಸುವ ಘಟಕವನ್ನ ಗಂಗಾವತಿಯ ಸಮಾನ ಮನಸ್ಕ ಯುವಕರು, ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಉಚಿತವಾಗಿ ನೀಡಿದ್ದಾರೆ.

Corona sample unit contribution from youth to Gangavati Government Hospital
ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ಯುವಕರಿಂದ ಕೊರೊನಾ ಸ್ಯಾಂಪಲ್ ಯುನಿಟ್ ಕೊಡುಗೆ
author img

By

Published : Apr 20, 2020, 2:02 PM IST

ಕೊಪ್ಪಳ: ಗಂಗಾವತಿ ನಗರದ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ಸಮಾನ ಮನಸ್ಕ ಯುವಕರು, ಕೊರೊನಾ ಸೋಂಕಿನ ಗಂಟಲು ದ್ರವ ಸ್ಯಾಂಪಲ್ ಸಂಗ್ರಹಿಸುವ ಘಟಕವನ್ನ ಉಚಿತವಾಗಿ ನೀಡಿದ್ದಾರೆ.

ಅಂದಾಜು ಮೂವತ್ತು ಸಾವಿರ ರೂಪಾಯಿ ಮೌಲ್ಯದ ಘಟಕವನ್ನ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಈಶ್ವರ ಸವುಡಿ ಅವರಿಗೆ ಯುವಕರ ಪರವಾಗಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಆಸೀಫ್ ಹುಸೇನ್ ವಿತರಿಸಿದರು. ಈ ವೇಳೆ ಮಾತನಾಡಿದ ಅವರು, ಕೋವಿಡ್ ಪ್ರಳಯಾಂತಕ ಮಾರಿಯಾಗಿದ್ದು, ವೈದ್ಯಕೀಯ ಸಿಬ್ಬಂದಿ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಹೆಚ್ಚು ರಕ್ಷಣೆ ನೀಡುವ ಘಟಕ ನೀಡಲಾಗಿದೆ.

ರೋಗಿಯಿಂದ ನೇರವಾಗಿ ಸಂಪರ್ಕ ಹೊಂದದೆ ಘಟಕದೊಳಗಿನಿಂದ ಕಾರ್ಯಾಚರಣೆ ಮಾಡುವ ಮೂಲಕ ವೈದ್ಯರು ತಮ್ಮನ್ನ ತಾವು ರಕ್ಷಿಸಿಕೊಳ್ಳಬಹುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.