ETV Bharat / state

ಮದುವೆ ದಿನವೇ ಪತ್ತೆಯಾಯ್ತು ಕೊರೊನಾ: ಮನೆಯಲ್ಲಿ ತಳಮಳ - ಸೀಲ್ ಡೌನ್

ಮದುವೆ ಮನೆಯ ಪಕ್ಕದ ಮನೆಯಲ್ಲಿಯೇ ಕೊರೊನಾ ಸೋಂಕು ಪೀಡಿತ ವ್ಯಕ್ತಿ ಪತ್ತೆಯಾಗಿರುವುದರಿಂದ ಮನೆಯ ಸಂಭ್ರಮದ ಮೇಲೆ ಆತಂಕದ ಛಾಯೆ ಆವರಿಸಿದೆ.

house
house
author img

By

Published : Jun 12, 2020, 10:12 AM IST

ಗಂಗಾವತಿ: ಇಲ್ಲಿನ ಐದನೇ ವಾರ್ಡ್​​​​ನ ಕಿಲ್ಲಾ ಏರಿಯಾದಲ್ಲಿ ವ್ಯಕ್ತಿಯೊಬ್ಬರ ಮನೆಯಲ್ಲಿ ಪುತ್ರನ ಮದುವೆ ನಿಶ್ಚಯವಾಗಿತ್ತು. ಆದರೆ, ದುರಾದೃಷ್ಟವಶಾತ್ ಅದೇ ಮನೆಯ ಸಮೀಪ ಇದೀಗ ಕೊರೊನಾ ಸೋಂಕು ಪೀಡಿತ ವ್ಯಕ್ತಿ ಪತ್ತೆಯಾಗಿರುವುದು, ಮದುವೆ ಮನೆಯ ಸಂಭ್ರಮದ ಮೇಲೆ ಆತಂಕದ ಛಾಯೆ ಆವರಿಸುವಂತೆ ಮಾಡಿದೆ.

ಹುಸೇನಸಾಬ್​​​​ ಬಾಳೆಕಾಯಿ ಎಂಬುವವರ ಮನೆಯಲ್ಲಿ ಮದುವೆ ನಿಶ್ಚಯವಾಗಿತ್ತು. ಪುತ್ರ ದೌಲತ್ರಿಗೆ ಬಳ್ಳಾರಿಯ ಕನ್ಯೆಯನ್ನು ತಂದುಕೊಳ್ಳುವ ಬಗ್ಗೆ ಈ ಮೊದಲೇ ಮಾತುಕತೆ ನಡೆದು ಜು.11ರಂದು ಬಳ್ಳಾರಿಯಲ್ಲಿ ಮದುವೆಯೂ ನಡೆದಿದೆ.

ಮದುವೆ ಮನೆಯ ಪಕ್ಕದ ಮನೆಯಲ್ಲಿಯೇ ಕೊರೊನಾ

ಮದುವೆ ಮನೆಯಲ್ಲಿನ ಬಹುತೇಕರು ಬುಧವಾರ ರಾತ್ರಿಯೇ ಇಲ್ಲಿಂದ ತೆರಳಿದ್ದು, ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಮರು ದಿನ ಅಂದರೆ ಶುಕ್ರವಾರ ಮನೆಯ ಮುಂದೆ ಆರತಕ್ಷತೆ (ವಲೀಮಾ) ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು.

ಆದರೆ, ಇದೀಗ ಮದುವೆ ಮನೆಯ ಸಂಭ್ರಮಕ್ಕೆ ಕೊರೊನಾ ಆತಂಕ ಕವಿದಿದ್ದು, ಮನೆಯ ಸುತ್ತಲಿನ ಪ್ರದೇಶವನ್ನು ಸೀಲ್ ಡೌನ್ ಮಾಡಿರುವ ಪರಿಣಾಮ ಇದೀಗ ಆರತಕ್ಷತೆಯನ್ನ ಮುಂದಕ್ಕೆ ಹಾಕಿರುವ ಕುಟುಂಬ ಗೊಂದಲದಲ್ಲಿ ಮುಳುಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.