ETV Bharat / state

ಯೋಗಭ್ಯಾಸ, ಕೇರಂ ಆಡುವ ಮೂಲಕ ರಿಲ್ಯಾಕ್ಸ್​ ಆದ ಸೋಂಕಿತರು!

author img

By

Published : May 18, 2021, 11:48 AM IST

ಶ್ರೀ ಗವಿಮಠದ ವೃದ್ಧಾಶ್ರಮದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಆಸ್ಪತ್ರೆಯಲ್ಲಿನ ಸೋಂಕಿತರು, ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗಭ್ಯಾಸ ಮಾಡಿದರು. ಬಳಿಕ ಕೇರಂ ಆಡುವ ಮೂಲಕ ರಿಲ್ಯಾಕ್ಸ್ ಆದರು.

Koppal
ಯೋಗಭ್ಯಾಸ, ಕೇರಂ ಆಡುವ ಮೂಲಕ ರಿಲ್ಯಾಕ್ಸ್​ ಆದ ಸೋಂಕಿತರು

ಕೊಪ್ಪಳ: ನಗರದ ಶ್ರೀ ಗವಿಮಠದ ವೃದ್ಧಾಶ್ರಮದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸವಾಗುತ್ತಿದೆ.

ಇಂದು ಆಸ್ಪತ್ರೆಯಲ್ಲಿನ ಸೋಂಕಿತರು ಸಾಮಾಜಿಕ ಅಂತರ ಕಾಯ್ದುಕೊಂಡು ಯೋಗಭ್ಯಾಸ ಮಾಡಿದರು. ಬಳಿಕ ಕೇರಂ ಆಡುವ ಮೂಲಕ ರಿಲ್ಯಾಕ್ಸ್ ಆದರು. ಬೆಳಗಿನ ಜಾವ ಕೋವಿಡ್ ಕೇರ್ ಸೆಂಟರ್​ಗೆ ಆಗಮಿಸಿದ ಗವಿಸಿದ್ದೇಶ್ವರ ಸ್ವಾಮೀಜಿ, ಸೋಂಕಿತರ ಆರೋಗ್ಯ ವಿಚಾರಿಸಿದರು.

ಎರಡನೇ ದಿನದ ಲಾಕ್​ಡೌನ್​ಗೆ ಕೊಪ್ಪಳ ನಗರ ಸಂಪೂರ್ಣ ಸ್ತಬ್ಧ

ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಜಾರಿ ಮಾಡಲಾಗಿರುವ ಸಂಪೂರ್ಣ ಲಾಕ್​ಡೌನ್​ನ ಎರಡನೇ ದಿನವಾದ ಇಂದು ಕೊಪ್ಪಳ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ವಾಹನಗಳ ಸಂಚಾರ ವಿರಳವಾಗಿದ್ದು, ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿವೆ. ಪೊಲೀಸರು ಅನಗತ್ಯವಾಗಿ ಓಡಾಡುತ್ತಿರುವವರನ್ನು ವಾಪಸ್ ಕಳಿಸುತ್ತಿದ್ದಾರೆ.

ಓದಿ: ನಿಮ್ಮನ್ನು ರಕ್ಷಣೆ ಮಾಡೋಕೆ ನಾವೇ ಉಳಿಯುವ ವಿಶ್ವಾಸವಿಲ್ಲ: ಆನಂದ್​​ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.