ಹೈದರಾಬಾದ್: ಸಿಂಗಾಪುರ ವಿಶ್ವದ ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಒಂದು. ಇಲ್ಲಿ ಜೂಲಾಜಿಕಲ್ ಗಾರ್ಡನ್ಸ್, ಉದ್ಯಾನವನಗಳಿವೆ. ಇದರಿಂದಾಗಿ ನಿತ್ಯ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇಂತಹ ಅದ್ಭುತ ದೇಶಕ್ಕೆ ಹೋಗಲು ನೀವು ಯೋಜಿಸುತ್ತಿದ್ದೀರಾ? ಅಥವಾ ದೂರದ ಊರಿಗೆ ಹೇಗೆ ಹೋಗುವುದು ಎಂದು ಗೊತ್ತಿಲ್ಲವಾ?. ಹಾಗಿದ್ದರೆ, ಚಿಂತೆ ಬೇಡ. ಇಂಡಿಯನ್ ರೈಲ್ವೆ ಇದಕ್ಕೆ ಪರಿಹಾರ ನೀಡುತ್ತದೆ.
ಆಗ್ನೇಯ ಏಷ್ಯಾದ ರಾಷ್ಟ್ರವಾದ ಸಿಂಗಾಪುರ, ಮಲೇಷ್ಯಾ ದೇಶಗಳನ್ನು ಕಡಿಮೆ ದರದಲ್ಲಿ ಸುತ್ತಾಡಿ ಬರಲು ಬಯಸುವವರಿಗೆ ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(ಐಆರ್ಸಿಟಿಸಿ) ಅತ್ಯುತ್ತಮ ಪ್ಯಾಕೇಜ್ ಪ್ರಕಟಿಸಿದೆ. ಈ ಪ್ಯಾಕೇಜ್ ಎಷ್ಟು ದಿನಗಳು? ಯಾವ ಸ್ಥಳಗಳನ್ನು ನೋಡಬಹುದು? ಬೆಲೆ ಎಷ್ಟು? ಪ್ರಯಾಣ ಯಾವಾಗ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
'ಮ್ಯಾಜಿಕಲ್ ಮಲೇಷಿಯಾ ವಿತ್ ಸಿಂಗಾಪುರ್ ಸೆನ್ಸೇಷನ್' ಎಂಬ ಹೆಸರಿನಲ್ಲಿ IRCTC ಪ್ಯಾಕೇಜ್ ಘೋಷಿಸಿದೆ. ಈ ಪ್ರವಾಸವು 6 ರಾತ್ರಿಗಳು ಮತ್ತು 7 ಹಗಲುಗಳವರೆಗೆ ಇರುತ್ತದೆ. ಈ ಪ್ರವಾಸವನ್ನು ಹೈದರಾಬಾದ್ ವಿಮಾನ ನಿಲ್ದಾಣದಿಂದ ಆರಂಭವಾಗುತ್ತದೆ.
ಮೊದಲ ದಿನ, ಮಧ್ಯರಾತ್ರಿ 12:30ಕ್ಕೆ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಪ್ರಯಾಣ ಆರಂಭವಾಗುತ್ತದೆ. ಅದೇ ದಿನ ಬೆಳಗ್ಗೆ 7:30ಕ್ಕೆ ಮಲೇಷ್ಯಾದ ಕೌಲಾಲಂಪುರದಲ್ಲಿ ವಿಮಾನ ಇಳಿಯಲಿದೆ. ಬಳಿಕ, ಮೊದಲೇ ಬುಕ್ ಮಾಡಿದ ಹೋಟೆಲ್‌ಗೆ ನಿಮ್ಮನ್ನು ಕರೆದೊಯ್ಯಲಾಗುತ್ತದೆ. ಬೆಳಗ್ಗೆ ಉಪಹಾರದ ಬಳಿಕ ಮಧ್ಯಾಹ್ನದವರೆಗೆ ವಿಶ್ರಾಂತಿ ಇರುತ್ತದೆ. ಊಟದ ನಂತರ ಶಾಪಿಂಗ್ ಮತ್ತು ಖ್ಯಾತ ಪುತ್ರಜಯ ಸ್ಥಳವನ್ನು ಭೇಟಿ ಮಾಡಬಹುದು. ಆ ರಾತ್ರಿ ಊಟವು ಭಾರತೀಯ ರೆಸ್ಟೋರೆಂಟ್‌ನಲ್ಲಿ ಇರಲಿದೆ. ಬಳಿಕ ಅಲ್ಲಿಯೇ ತಂಗಬೇಕು.
ಎರಡನೇ ದಿನ, ಹೋಟೆಲ್‌ನಲ್ಲಿ ಉಪಹಾರದ ನಂತರ, ಬಟು ಗುಹೆಗಳಿಗೆ ಭೇಟಿ ಇರಲಿದೆ. ನಂತರ ಜೆಂಟಿಂಗ್ ಹೈಲ್ಯಾಂಡ್ಸ್‌ಗೆ ಭೇಟಿ, ಬಳಿಕ ಕೌಲಾಲಂಪುರಕ್ಕೆ ವಾಪಸ್. ರಾತ್ರಿ ನಿಗದಿತ ಹೋಟೆಲ್‌ನಲ್ಲಿ ಉಳಿಯಬೇಕು.
ಮೂರನೇ ದಿನ, ಬೆಳಗ್ಗೆ ಉಪಹಾರದ ನಂತರ, ಕೌಲಾಲಂಪುರದ ನಗರ ಪ್ರವಾಸ ಇರಲಿದೆ. ಇಂಡಿಪೆಂಡೆನ್ಸ್ ಸ್ಕೇರ್, ಕಿಂಗ್ಸ್ ಪ್ಯಾಲೇಸ್, ರಾಷ್ಟ್ರೀಯ ಸ್ಮಾರಕಕ್ಕೆ ಭೇಟಿ. ನಂತರ ಪೆಟ್ರೋನಾಸ್ ಟ್ವಿನ್ ಟವರ್ (ಸ್ಕೈ ಬ್ರಿಡ್ಜ್ ಎಂಟ್ರಿ) ಗೆ ಭೇಟಿ. ಮಧ್ಯಾಹ್ನದ ಊಟದ ನಂತರ ಚಾಕೊಲೇಟ್ ಫ್ಯಾಕ್ಟರಿಗೆ ಭೇಟಿ. ಬರ್ಗಿಯಾ ಟೈಮ್ಸ್ ಸ್ಕ್ವೇರ್‌ನಲ್ಲಿ ಶಾಪಿಂಗ್ಗೆ ಅವಕಾಶ. ಅಂದು ರಾತ್ರಿ ಕೌಲಾಲಂಪುರದಲ್ಲಿ ಊಟ ಮಾಡಿ ಅಲ್ಲಿಯೇ ವಿಶ್ರಾಂತಿ.
ನಾಲ್ಕನೇ ದಿನ, ಉಪಹಾರದ ನಂತರ ಸಿಂಗಾಪುರಕ್ಕೆ ಪ್ರಯಾಣ. ಬೇ ಗಾರ್ಡನ್‌ಗೆ ಭೇಟಿ ಇರಲಿದೆ. ಅಂದು ರಾತ್ರಿ ಅಲ್ಲಿಯೇ ಊಟ, ವಸತಿ ವ್ಯವಸ್ಥೆ ಇರಲಿದೆ.
ಐದನೇ ದಿನ, ಬೆಳಗಿನ ಉಪಾಹಾರದ ನಂತರ ಸಿಂಗಾಪುರ ನಗರ ಪ್ರದಕ್ಷಿಣೆ. ಆರ್ಕಿಡ್ ಗಾರ್ಡನ್, ಮೆರ್ಲಿಯನ್ ಪಾರ್ಕ್, ಸಿಂಗಾಪುರ್ ಫ್ಲೈಯರ್ ವ್ಯೂ. ಬಳಿಕ ಮಧ್ಯಾಹ್ನದ ಊಟದ ನಂತರ, ಒನ್ ವೇ ಕೇಬಲ್ ಕಾರ್ ಸವಾರಿ, ಮೇಡಮ್ ಟುಸ್ಸಾಡ್ಸ್, ವಿಂಗ್ಸ್ ಆಫ್ ಟೈಮ್ಗೆ ಭೇಟಿ. ರಾತ್ರಿ ಭೋಜನ ಸಿಂಗಾಪುರದ ಹೋಟೆಲ್‌ನಲ್ಲಿ ಇರಲಿದೆ. ಅಲ್ಲಿಯೇ ವಸತಿ.
ಆರನೇ ದಿನ, ಬೆಳಗ್ಗೆ ಉಪಹಾರದ ನಂತರ ಯೂನಿವರ್ಸಲ್ ಸ್ಟುಡಿಯೋಗೆ ಭೇಟಿ. ಸಂಜೆ ಹೋಟೆಲ್‌ಗೆ ಹಿಂತಿರುಗಿ, ಭೋಜನ ಪೂರ್ಣಗೊಳಿಸಿ, ಅಲ್ಲಿಯೇ ಉಳಿದುಕೊಳ್ಳಿ.
ಏಳನೇ ದಿನ, ಉಪಹಾರದ ನಂತರ ಚೆಕ್ ಔಟ್ ಇರಲಿದೆ. ಜುರಾಂಗ್ ಬರ್ಡ್ ಪಾರ್ಕ್‌ಗೆ ಭೇಟಿ. ಊಟದ ನಂತರ ಚಾಂಗಿ ವಿಮಾನ ನಿಲ್ದಾಣವನ್ನು ತಲುಪಿ. ಅಲ್ಲಿಂದ ಕೌಲಾಲಂಪುರ ಮಾರ್ಗವಾಗಿ ಹೈದರಾಬಾದ್ ತಲುಪುವ ಮೂಲಕ ಪ್ರವಾಸ ಪೂರ್ಣಗೊಳ್ಳಲಿದೆ.
ಪ್ರವಾಸ ದರ ಹೀಗಿದೆ
- ಒಬ್ಬರಿಗೆ 1,56,030 ರೂಪಾಯಿ ಇರಲಿದೆ. ಡಬಲ್ ಶೇರಿಂಗ್ಗೆ 1,29,280 ರೂ., ಟ್ರಿಪಲ್ ಹಂಚಿಕೆಗೆ 1,28,720 ರೂ. ಪಾವತಿಸಬೇಕು.
- 5 ರಿಂದ 11 ವರ್ಷದವರಿಗೆ ವಿತ್ ಬೆಡ್ ಬೇಕಿದ್ದರೆ 1,11,860 ರೂ. ದರ ಇದೆ.
- 2 ರಿಂದ 11 ವರ್ಷದ ಬಾಲಕಿಯರಿಗೆ ವಿಥೌಟ್ ಬೆಡ್ಗೆ 98.820 ರೂ. ದರ ಇದೆ.
ಪ್ಯಾಕೇಜ್ನಲ್ಲಿ ಏನೆಲ್ಲಾ ಇರುತ್ತೆ
- ವಿಮಾನ ಟಿಕೆಟ್‌ಗಳು (ಹೈದರಾಬಾದ್ನಿಂದ ಕೌಲಾಲಂಪುರ್ / ಸಿಂಗಾಪುರದಿಂದ ಹೈದರಾಬಾದ್)
- ಹೋಟೆಲ್‌ನಲ್ಲಿ ವಸತಿ ವಿವರ
- 7 ಉಪಹಾರಗಳು, 7 ಊಟಗಳು ಮತ್ತು 6 ರಾತ್ರಿಯ ಊಟಗಳನ್ನು ಒದಗಿಸಲಾಗುತ್ತದೆ.
- ಪ್ರವಾಸ ಪೂರ್ಣಗೊಳ್ಳುವವರೆಗೆ ಮಾರ್ಗದರ್ಶಕರು(ಗೈಡ್) ಇರಲಿದ್ದಾರೆ.
- ಪ್ರಯಾಣ ವಿಮೆ ಲಭ್ಯವಿದೆ.
- ಅಕ್ಟೋಬರ್ 28 ರಿಂದ ಈ ಪ್ಯಾಕೇಜ್ ಲಭ್ಯವಿದೆ.
- ಈ ಪ್ಯಾಕೇಜ್ ಬಗ್ಗೆ ಪೂರ್ಣ ಮಾಹಿತಿ ಮತ್ತು ಬುಕಿಂಗ್ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.