ಕೊಪ್ಪಳ: ಜಿಲ್ಲೆಯಲ್ಲಿಂದು ಕೊರೊನಾ ಸೋಂಕಿಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.
ನಗರದ ನಿವಾಸಿ 49 ವರ್ಷದ ಪುರುಷ (ಪಿ-16,430) ವೈರಸ್ಗೆ ಬಲಿಯಾಗಿದ್ದಾನೆ. ತೀವ್ರ ಉಸಿರಾಟದ ಸೋಂಕಿನ ಹಿನ್ನೆಲೆ ಜೂನ್ 29 ರಂದು ಈ ವ್ಯಕ್ತಿಯನ್ನು ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲದೇ ನಿನ್ನೆಯಷ್ಟೇ ಈ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು.
ಇಂದು ಬೆಳಗ್ಗೆ ಸೋಂಕಿತ ಸಾವನ್ನಪ್ಪಿರುವುದಾಗಿ ಜಿಲ್ಲಾಡಳಿತ ಅಧಿಕೃತವಾಗಿ ಘೋಷಣೆ ಮಾಡಿದೆ. ಕೊರೊನಾಗೆ ಈ ಹಿಂದೆ ಮಹಿಳೆಯೊಬ್ಬಳು ಬಲಿಯಾಗಿದ್ದು, ಇಂದು ಜಿಲ್ಲೆಯಲ್ಲಿ ಎರಡನೇ ಸಾವು ಸಂಭವಿಸಿದೆ.