ETV Bharat / state

ಕೇಕ್​ ತಯಾರಕರ ಮೇಲೂ ಕೊರೊನಾ ಕರಿನೆರಳು, ಆದಾಯ ಖೋತಾ - ಕೊರೊನಾದಿಂದ ಕೇಕ್​ಗಳಿಗೆ ಕುಗ್ಗಿದ ಬೇಡಿಕೆ

ಮುಂಗಡವಾಗಿ ಕೇಕ್ ತಯಾರಿಸಿ ಮಾರಾಟ ಮಾಡುತ್ತಿದ್ದವರು, ಈಗ ಮುಂಗಡವಾಗಿ ಕೇಕ್ ತಯಾರಿಸಿದರೆ ಮಾರಾಟವಾಗುವುದು ಅನುಮಾನ ಎಂಬ ಕಾರಣಕ್ಕೆ ಕೇಕ್ ತಯಾರಿಸಿಲ್ಲ ಎನ್ನುತ್ತಾರೆ ಬೇಕರಿಗಳ ಮಾಲೀಕರು ಹಾಗೂ ಕೇಕ್ ತಯಾರಕರು.

cake makers
ಆದಾಯ ಖೋತಾ
author img

By

Published : Dec 31, 2021, 1:18 PM IST

ಕೊಪ್ಪಳ: ಹೊಸವರ್ಷವನ್ನು ಕೇಕ್ ಕತ್ತರಿಸಿ ಸ್ವಾಗತಿಸುವುದು ವಾಡಿಕೆ. ಹೀಗಾಗಿ ಪ್ರತಿ ವರ್ಷವೂ ಕೇಕ್ ತಯಾರಿಕೆ ಹಾಗೂ ವ್ಯಾಪಾರ ಜೋರಾಗಿರುತ್ತಿತ್ತು‌. ಆದರೆ, ಒಮಿಕ್ರಾನ್ ಹಾಗೂ ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ಇದರ ಪರಿಣಾಮವಾಗಿ ಈ ಬಾರಿ ಕೇಕ್ ವ್ಯಾಪಾರ ಕುಸಿದಿರುವುದು ಕೇಕ್ ತಯಾರಕರಲ್ಲಿ ಹೊಸ ವರ್ಷದ ಸಂಭ್ರಮ ಮಂಕಾಗಿದೆ.

ಕೊರೊನಾ ಹರಡುವಿಕೆ ನಿಯಂತ್ರಿಸಲು ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದಲ್ಲಿ 10 ದಿನಗಳ ನೈಟ್ ಕರ್ಫ್ಯೂ ಹಾಗೂ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಕ್ರಮಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರಿಂದಾಗಿ ಈ ವರ್ಷ ಸಾರ್ವಜನಿಕವಾಗಿ ಹೊಸ ವರ್ಷಾಚರಣೆ ಮಾಡುವಂತಿಲ್ಲ. ಇದು ಕೇಕ್ ತಯಾರಕರ ಮೇಲೂ ಪರಿಣಾಮ ಬಿದ್ದಿದೆ.

ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಬಗೆ ಬಗೆಯ ಕೇಕ್​ಗಳು ಸಿದ್ಧವಾಗುತ್ತಿದ್ದವು. ಹೊಸವರ್ಷದ ಸಂದೇಶ, ಪ್ರಮುಖ ಘಟನೆಗಳ ಕುರಿತು ಕೇಕ್​ಗಳನ್ನು ತಯಾರಿಸುತ್ತಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ವರ್ಷಾಚರಣೆ ಕಳೆಗಟ್ಟುತ್ತಿತ್ತು. 10 ಕೆಜಿ ತೂಕದ ದೊಡ್ಡದೊಡ್ಡ ಕೇಕ್​ಗಳನ್ನು ತಯಾರಿಸುತ್ತಿದ್ದರು.

ಆದರೆ ಕಳೆದ ವರ್ಷದಂತೆಯೇ ಈ ವರ್ಷವೂ ಕೊರೊನಾ ಕಾರಣಕ್ಕಾಗಿ ಸಂಭ್ರಮಾಚರಣೆಗೆ ಬ್ರೇಕ್​ ಬಿದ್ದಿದೆ. ಸರ್ಕಾರದ ಕಠಿಣ ಕ್ರಮಗಳಿಂದಾಗಿ ಕೇಕ್​ಗಳ ತಯಾರಿಕೆಗೆ ಬೇಡಿಕೆ ಬಾರದೇ ಇರುವುದು ವರ್ತಕರ ವ್ಯಾಪಾರದ ಮೇಲೆ ನಕಾರಾತ್ಮಕ ಪರಿಣಾಮ ಬಿದ್ದಿದೆ.

ಕೊಪ್ಪಳದಲ್ಲಿ ಬಹುತೇಕ ಬೇಕರಿಗಳಲ್ಲಿ ಕೇಕ್ ಆರ್ಡರ್ ಕೊಟ್ಟವರ ಸಂಖ್ಯೆ ಅತ್ಯಂತ ಕಡಿಮೆ. 2 ವರ್ಷದ ಹಿಂದೆ ಪ್ರತಿ ಬೇಕರಿಯಲ್ಲಿ 100 -200 ಕೇಕ್​ಗಳಿಗೆ ಬೇಡಿಕೆ ಇರುತ್ತಿತ್ತು. ಆದರೆ ಈ ವರ್ಷ ಕೇವಲ 10- 15 ಮಾತ್ರ ಆರ್ಡರ್ ಬಂದಿವೆ. ಹೊಸ ವರ್ಷಾಚರಣೆವೇಳೆ ಕೇಕ್ ತಯಾರಿಕರಿಗೆ ಸಾಕಷ್ಟು ಆದಾಯ ಬರುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ಆದಾಯಕ್ಕೆ ಖೋತಾ ಬಿದ್ದಿದೆ.

ಮುಂಗಡವಾಗಿ ಕೇಕ್ ತಯಾರಿಸಿ ಮಾರಾಟ ಮಾಡುತ್ತಿದ್ದವರು. ಈಗ ಮುಂಗಡವಾಗಿ ಕೇಕ್ ತಯಾರಿಸಿದರೆ ಮಾರಾಟವಾಗುವುದು ಅನುಮಾನ ಎಂಬ ಕಾರಣಕ್ಕೆ ಕೇಕ್ ತಯಾರಿಸಿಲ್ಲ ಎನ್ನುತ್ತಾರೆ ಬೇಕರಿಗಳ ಮಾಲೀಕರು ಹಾಗೂ ಕೇಕ್ ತಯಾರಕರು.

ಇದನ್ನೂ ಓದಿ: ಕೊಪ್ಪಳದ 'ಡೆತ್​ಸ್ಪಾಟ್​' ಸಣಾಪುರ ಕೆರೆಯಲ್ಲಿ ಅಸುರಕ್ಷಿತ ದೋಣಿ ವಿಹಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.