ಕುಷ್ಟಗಿ: ಕೊರೊನಾ ಭೀತಿಯ ನಡುವೆಯೂ ನರೇಗಾ ಯೋಜನೆ ಅಡಿಯಲ್ಲಿ ಬದು ನಿರ್ಮಾಣ ಕೆಲಸ ಆರಂಭವಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಮಾಸ್ಕ್ ವಿತರಿಸಿದರು.
ತಾಲೂಕಿನ ಹೂಲಗೇರಾ ಸಮೀಪದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 100ಕ್ಕೂ ಅಧಿಕ ಕಾರ್ಮಿಕರಿಗೆ ಕೊರೊನಾ ಸೋಂಕಿನ ಕುರಿತು ಜಾಗೃತಿ ಮೂಡಿಸಲಾಯಿತು.
ಕೊರೊನಾ ಹಿನ್ನೆಲೆ ನರೇಗಾ ಯೋಜನೆ ಅಡಿ ಸಮುದಾಯ ಕಾಮಗಾರಿಗಳ ಬದಲಿಗೆ ವೈಯಕ್ತಿಕವಾಗಿ ಬದು ನಿರ್ಮಾಣ, ಕೃಷಿ ಹೊಂಡ, ಇಂಗು ಗುಂಡಿ, ದನದ ದೊಡ್ಡಿ, ಅರಣ್ಯೀಕರಣ, ತೋಟಗಾರಿಕೆ ಸೇರಿದಂತೆ ಇತರೆ ಕೆಲಸಗಳನ್ನು ಕೈಗೆತ್ತಿಕ್ಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.