ಕುಷ್ಟಗಿ(ಕೊಪ್ಪಳ): ನಿಯಂತ್ರಣ ತಪ್ಪಿ ಹಾಲಿನ ಕಂಟೈನರ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಟೈನರ್ನಲ್ಲಿ ಸಿಲುಕಿಕೊಂಡಿದ್ದ ಚಾಲಕ ಮತ್ತು ಕ್ಲೀನರ್ನನ್ನು ರಕ್ಷಿಸಿದ ಘಟನೆ ನಡೆದಿದೆ.
ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಚಲಿಸುತ್ತಿದ್ದ ಹಾಲಿನ ಕಂಟೈನರ್ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮ ಚಾಲಕ ಮತ್ತು ಕ್ಲೀನರ್ ಒಳಗಡೆ ಸಿಲುಕಿಕೊಂಡಿದ್ದರು. ಇದನ್ನು ಕಂಡ ಸ್ಥಳೀಯರು ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಹೈವೇ ಪ್ಯಾಟ್ರೋಲಿಂಗ್ ಸಿಬ್ಬಂದಿ ಆಗಮಿಸಿ ಹೋಲ್ ಮೀಟರ್ ಯಂತ್ರದಿಂದ ಚಾಲಕ ಮತ್ತು ಕ್ಲೀನರ್ನನ್ನು ಹೊರಗೆ ತೆಗೆಯಲು ಹರಸಹಾಸ ಪಟ್ಟರು. ಹುಬ್ಬಳ್ಳಿ ನವನಗರ ಮೂಲದ ರೇವಣಸಿದ್ದಯ್ಯ ಹಾಗೂ ಕ್ಲೀನರ್ ನಿರಂಜನ್ ಅಶೋಕ ಕಂಟೈನರ್ನಲ್ಲಿ ಸಿಲುಕಿಕೊಂಡಿದ್ದ ವ್ಯಕ್ತಿಗಳು. ಘಟನೆಯಲ್ಲಿ ಚಾಲಕನಿಗೆ ಬಲಗೈ ಮುರಿದಿದ್ದು, ಕ್ಲೀನರ್ಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.