ಕುಷ್ಟಗಿ (ಕೊಪ್ಪಳ): ಕುಷ್ಟಗಿ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸಂಪರ್ಕ ಕಳೆದುಕೊಂಡ ಇಬ್ಬರು ಪುರಸಭೆ ಸದಸ್ಯರಿಗೆ ಕಾಂಗ್ರೆಸ್ ಪಕ್ಷದಿಂದ ಪ್ರತ್ಯೇಕವಾಗಿ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಕುಷ್ಟಗಿ ಪುರಸಭೆ 3ನೇ ವಾರ್ಡ್ ಸದಸ್ಯೆ ಗೀತಾ ಶರಣಪ್ಪ ತುರಕಾಣಿ ಹಾಗೂ 17ನೇ ವಾರ್ಡ್ ಸದಸ್ಯ ವೀರೇಶ ಗೌಡ ಬೆದವಟ್ಟಿ ಎಂಬುವರು ಪ್ರತಿಪಕ್ಷವಾದ ಬಿಜೆಪಿಯೊಂದಿಗೆ ಗುರುತಿಸಿಕೊಂಡು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರಣ ಕೇಳಿ ಕುಷ್ಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ ಅವರು ಅ. 18ರಂದು ನೋಟಿಸ್ ಜಾರಿ ಮಾಡಿದ್ದಾರೆ.
![ಕಾಂಗ್ರೆಸ್ನಿಂದ ನೋಟಿಸ್ ಜಾರಿ](https://etvbharatimages.akamaized.net/etvbharat/prod-images/kn-kst-05-congress-notice-kac10028_19102020221807_1910f_1603126087_792.jpg)
ನೋಟಿಸ್ ನೀಡಿದ ದಿನಾಂಕದಿಂದ ಮೂರು ದಿನದೊಳಗೆ ಖುದ್ದಾಗಿ ಇಲ್ಲವೇ ಲಿಖಿತವಾಗಿ ಸ್ಪಷ್ಟನೆ ನೀಡಬೇಕು. ಇಲ್ಲವಾದಲ್ಲಿ ಪಕ್ಷದಿಂದ ಕಾನೂನಾತ್ಮಕ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.