ETV Bharat / state

ಕೊಪ್ಪಳದಲ್ಲಿ ಜೂನ್ 7ರವರೆಗೆ ಕಂಪ್ಲೀಟ್​ ಲಾಕ್​ಡೌನ್​

ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಈಗಾಗಲೇ 24ರಿಂದ ಸಂಪೂರ್ಣ ಲಾಕ್​ಡೌನ್ ಘೋಷಿಸಲಾಗಿತ್ತು. ಆದ್ರೆ ಸೋಂಕಿನ ಸಂಖ್ಯೆ ಏರಿಕೆ ಕಂಡ ಕಾರಣ ಮೇ. 31ರಿಂದ ಜೂನ್ 7 ಮಧ್ಯರಾತ್ರಿ 12ರವರೆಗೆ ಸಂಪೂರ್ಣ ಲಾಕ್​ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

author img

By

Published : May 30, 2021, 1:56 PM IST

Koppal
ವಿಕಾಸ್ ಕಿಶೋರ್ ಸುರಳ್ಕರ್

ಕೊಪ್ಪಳ: ಕೊರೊನಾ ಸೋಂಕು ನಿಯಂತ್ರಿಸುವ ‌ನಿಟ್ಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಜೂನ್ 7ರವರೆಗೆ ಸಂಪೂರ್ಣ ಲಾಕ್​ಡೌನ್ ವಿಸ್ತರಿಸಲಾಗಿದೆ. ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್​​​ಡೌನ್ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಕೊರೊನಾ ಸೋಂಕು ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಈಗಾಗಲೇ 24ರಿಂದ ಸಂಪೂರ್ಣ ಲಾಕ್​ಡೌನ್ ಹಾಗೂ ಅದಕ್ಕೂ ಮೊದಲು ಐದು ದಿನ ಸಂಪೂರ್ಣ ಲಾಕ್​ಡೌನ್ ಜಾರಿ ಮಾಡಲಾಗಿತ್ತು. ಮೇ 24ರಿಂದ ಜಾರಿ ಮಾಡಲಾಗಿದ್ದ ಲಾಕ್​​ಡೌನ್ ಆದೇಶ ಇಂದಿಗೆ ಮುಗಿಯಲಿದ್ದು, ನಾಳೆ ಮೇ. 31ರಿಂದ ಜೂನ್ 7 ಮಧ್ಯರಾತ್ರಿ 12ರವರೆಗೆ ಸಂಪೂರ್ಣ ಲಾಕ್​​ಡೌನ್ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.

Koppal
ಲಾಕ್​ಡೌನ್​ ವಿಸ್ತರಣೆ ಆದೇಶ ಪ್ರತಿ

ಸಂಪೂರ್ಣ ಲಾಕ್​ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳಾದ ಹಾಲು, ಔಷಧಿ, ಆಸ್ಪತ್ರೆಗಳು ಸೇರಿದಂತೆ ಅಗತ್ಯ ವಸ್ತುಗಳು ಹಾಗೂ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಅನುಮತಿಸಿದ ಚಟುವಟಿಕೆಗಳನ್ನು ಬಿಟ್ಟು ಅನಗತ್ಯವಾಗಿ ಜನರು ಓಡಾಡದಂತೆ ಹಾಗೂ ಈ ಹಿಂದಿನ ಲಾಕ್​ಡೌನ್ ಅವಧಿಯ ನಿಯಮಗಳು ವಿಸ್ತರಣೆಯಾಗಿರುವ ಲಾಕ್​ಡೌನ್ ಅವಧಿಯಲ್ಲಿ ಮುಂದುವರೆಯಲಿವೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.