ETV Bharat / state

ಶ್ರೀಗವಿಸಿದ್ದೇಶ್ವರ ಆಸ್ಪತ್ರೆಯ ಸೌಲಭ್ಯಗಳ ಸಮಸ್ಯೆ ಶೀಘ್ರ ಇತ್ಯರ್ಥ: ಕೊಪ್ಪಳ ಡಿಸಿ

author img

By

Published : Apr 20, 2020, 6:20 PM IST

ಜಿಲ್ಲಾಸ್ಪತ್ರೆಯನ್ನು ಶಿಫ್ಟ್ ಮಾಡಿದ ಮೇಲೆ ಅಲ್ಲಿ ಓಪಿಡಿ, ಹೆರಿಗೆ ಸೇರಿದಂತೆ ಸಾರ್ವಜನಿಕರಿಗೆ ಕೆಲ ಸೇವೆಗಳನ್ನು ಒದಗಿಸಲಾಗುತ್ತಿದೆ. ಅಲ್ಲಿ ಕೆಲ ಸಣ್ಣಪುಟ್ಟ ಸಮಸ್ಯೆಗಳು ಇವೆ. ಈ ಕುರಿತಂತೆ ಸಾರ್ವಜನಿಕರು ದೂರುತ್ತಿದ್ದಾರೆ. ಇದು ನನ್ನ ಗಮನಕ್ಕೂ ಸಹ ಬಂದಿದೆ. ಡಯಾಲಿಸಿಸ್​ಗೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಡಯಾಲಿಸಿಸ್​​​​ಗೆ ಲಯನ್ಸ್ ಕ್ಲಬ್​ನ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ ಸುನೀಲ್​ ಕುಮಾರ್ ಹೇಳಿದ್ದಾರೆ.

Complaints against Temporary District hospital will be Correct soon: DC Clear
ತಾತ್ಕಾಲಿಕ ಜಿಲ್ಲಾಸ್ಪತ್ರೆಯ ವಿರುದ್ಧದ ದೂರುಗಳನ್ನು ಸರಿಪಡಿಸಲಾಗುವುದು: ಡಿಸಿ ಸ್ಪಷ್ಟನೆ

ಕೊಪ್ಪಳ: ನಗರದ ಜಿಲ್ಲಾ ಆಸ್ಪತ್ರೆಯನ್ನು ಕೋವಿಡ್-19 ಸೋಂಕಿತರ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇದಕ್ಕೆ ಪರ್ಯಾಯವಾಗಿ ನಗರದ ಶ್ರೀ ಗವಿಸಿದ್ದೇಶ್ವರ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ತಾತ್ಕಾಲಿಕ ಜಿಲ್ಲಾಸ್ಪತ್ರೆ ನಡೆಸಲಾಗುತ್ತಿದೆ. ಅಲ್ಲಿನ ಸಣ್ಣ-ಪುಟ್ಟ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಪಿ. ಸುನೀಲ್ ​​ಕುಮಾರ್ ಅಭಯ ನೀಡಿದ್ದಾರೆ.

ಕೊಪ್ಪಳದಲ್ಲಿ ತಾತ್ಕಾಲಿಕ ಜಿಲ್ಲಾಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್

ಜಿಲ್ಲಾ ಆಸ್ಪತ್ರೆ ಬದಲಾವಣೆ ಮಾಡಿದ ಮೇಲೆ ಅಲ್ಲಿಯೇ ಓಪಿಡಿ, ಹೆರಿಗೆ ಸೇರಿದಂತೆ ಕೆಲ ಸೇವೆಗಳನ್ನು ಒದಗಿಸಲಾಗುತ್ತಿದೆ. ಅಲ್ಲಿ ಕೆಲವು ಸಣ್ಣ-ಪುಟ್ಟ ಸಮಸ್ಯೆಗಳು ಇವೆ ಎಂದು ಸಾರ್ವಜನಿಕರು ದೂರಿದ್ದು ನನ್ನ ಗಮನಕ್ಕೆ ಬಂದಿದೆ. ಡಯಾಲಿಸಿಸ್​ಗೆ ತೊಂದರೆ ಆಗುತ್ತಿದೆ ಎಂದು ಹಲವರು ಹೇಳಿದ್ದಾರೆ. ಡಯಾಲಿಸಿಸ್​​​​ ಸೇವೆಗೆ ಲಯನ್ಸ್ ಕ್ಲಬ್​ ಆಸ್ಪತ್ರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಖಾಸಗಿ ಆಸ್ಪತ್ರೆಗಳು ಸಹ ಇದಕ್ಕೆ ಸಹಕರಿಸಬೇಕಿದೆ. ಆರೋಗ್ಯ ಕರ್ನಾಟಕ ಹಾಗೂ ಆಯುಷ್ಮಾನ್ ಭಾರತ ಯೋಜನೆಯ ಸೌಲಭ್ಯ ಬಳಸಿಕೊಂಡು ಸಾರ್ವಜನಿಕರಿಗೆ ವೈದ್ಯಕೀಯ ಸೇವೆ ನೀಡಬೇಕೆಂದು ಸೂಚಿಸಲಾಗಿದೆ. ರೋಗಿಗಳಿಗೆ ತೊಂದರೆ ನೀಡಿದ ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.