ಕುಷ್ಟಗಿ (ಕೊಪ್ಪಳ): ಸಂಜೀವಪ್ಪ ಚಲವಾದಿ ಹಾಗೂ ಕನಕಗಿರಿಯ ಮುತ್ತಮ್ಮ ಎಂಬುವರ ಮದುವೆ ಆಮಂತ್ರಣ ಪತ್ರದಲ್ಲಿ ಮದುವೆ ಸಮಾರಂಭಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ಮನವಿ ಮಾಡಲಾಗಿದೆ.
ಸಾಮಾನ್ಯವಾಗಿ ಮದುವೆ ಆಮಂತ್ರಣದಲ್ಲಿ ಕುಟುಂಬಸ್ಥರೊಂದಿಗೆ ಆಗಮಿಸಿ ನೂತನ ವಧು-ವರರನ್ನು ಆಶೀರ್ವದಿಸಿ ಎಂದು ಬರೆದಿರಲಾಗುತ್ತದೆ. ಇದೀಗ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮದುವೆ ಅಮಂತ್ರಣ ಪತ್ರಿಕೆಯಲ್ಲೂ ಸೋಂಕು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ತಾವರಗೇರಾ ಪಟ್ಟಣದಲ್ಲಿ ಇಂದು ಸಂಜೀವಪ್ಪ ಚಲವಾದಿ ಹಾಗೂ ಕನಕಗಿರಿಯ ಮುತ್ತಮ್ಮ ಎಂಬುವರ ಮದುವೆ ಸಮಾರಂಭವಿದ್ದ ಹಿನ್ನೆಲೆ ಆಮಂತ್ರಣ ಪತ್ರದಲ್ಲಿ ಮದುವೆ ಸಮಾರಂಭಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರುವಂತೆ ಉಲ್ಲೇಖಿಸಿರುವುದು ಗಮನ ಸೆಳೆದಿದೆ.