ಕೊಪ್ಪಳ: ನಗರದ ಕೋಟೆ ಆಂಜನೇಯ ದೇವಸ್ಥಾನದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾಧಿಕಾರಿಗಳು ಇಬ್ಬರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮಂಜುನಾಥ್ ಗೊಂಡಬಾಳ ಹಾಗೂ ದೇವಸ್ಥಾನದ ಅರ್ಚಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಕೆ. ರಾಜಶೇಖರ ಹಿಟ್ನಾಳ್ಗೆ ಟಿಕೆಟ್ ಸಿಗಲಿ ಎಂದು ಕಾಂಗ್ರೆಸ್ ಮುಖಂಡ ಮಂಜುನಾಥ್ ಗೊಂಡಬಾಳ ಕಾರ್ಯಕರ್ತರೊಂದಿಗೆ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಹಮ್ಮಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಕೆ.ರಾಜಶೇಖರ ಹಿಟ್ನಾಳ್, ಪೇಜಾವರ ಶ್ರೀಗಳ ಫೋಟೋ, ತನ್ನ ಹೆಸರು ಹಾಗೂ ಹುದ್ದೆ ಇದ್ದ ಬ್ಯಾನರ್ ಹಾಕಿದ್ದರು. ಈ ಕುರಿತಂತೆ ಮಾಹಿತಿ ಪಡೆದ ಐಎಎಸ್ ಪ್ರೊಬೇಷನರಿ ಅಧಿಕಾರಿ ಅಕ್ಷಯಕುಮಾರ್ ಸ್ಥಳಕ್ಕಾಗಮಿಸಿ ಬ್ಯಾನರ್ ವಶಕ್ಕೆ ಪಡೆದು ದೂರು ದಾಖಲಿಸುವುದಾಗಿ ಹೇಳಿದ್ದರು.
ಅದರಂತೆ ಮಂಜುನಾಥ್ ಗೊಂಡಬಾಳ್, ದೇವಸ್ಥಾನದ ಅರ್ಚಕನ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.