ಕೊಪ್ಪಳ: ಕೊಪ್ಪಳ ಗವಿಮಠದ 5000 ವಿದ್ಯಾರ್ಥಿಗಳ ವಸತಿ ನಿಲಯಕ್ಕೆ 10 ಕೋಟಿ ರೂ. ಅನುದಾನ ನೀಡಿದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗವಿಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ನಂತರ ಮಾತನಾಡಿದ ಅವರು, ಗವಿಮಠ ಬಹು ವರ್ಷದಿಂದ ತ್ರಿವಿಧ ದಾಸೋಹ ನಡೆಸಿಕೊಂಡು ಬಂದಿದೆ. ಆ ಪರಂಪರೆ ಮುಂದುವರೆಸಿರುವ ಗವಿಶ್ರೀಗಳು ಈ ಭಾಗದ ಬಡ ಮಕ್ಕಳಿಗೆ ನಂದಾದೀಪವಾಗಿದ್ದಾರೆ. ಅವರ ಕಾರ್ಯ ಈ ನಾಡಿನ ಜನತೆಯ ಸೌಭಾಗ್ಯ. ವರ್ಷದಿಂದ ವರ್ಷಕ್ಕೆ ವಸತಿ ನಿಲಯಕ್ಕೆ ಸೇರ ಬಯಸುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಅವರಿಗೆಲ್ಲ ವಸತಿ ಕಲ್ಪಿಸಬೇಕೆಂದು ಶ್ರೀಗಳು ಸಂಕಲ್ಪ ಮಾಡಿದ್ದಾರೆ ಎಂದರು.
ಭಕ್ತರಿಂದ ದೇಣಿಗೆ ಪಡೆದು ವಸತಿ ನಿಲಯ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ ನಮ್ಮ ಶಾಸಕರು, ಸಂಸದರು, ಸಚಿವರ ಒತ್ತಾಸೆ ಮೇರೆಗೆ ಮಠಕ್ಕೆ 10 ಕೋಟಿ ರೂ. ಅನುದಾನ ನೀಡಿದ್ದೇವೆ. ಸರ್ಕಾರ ಮಾಡುವ ಕೆಲಸವನ್ನು ಶ್ರೀಗಳು ಮಾಡುತ್ತಿದ್ದಾರೆ. ಅವರ ಆಶೀರ್ವಾದ ಸದಾ ಈ ನಾಡಿನ ಜನತೆ ಮೇಲಿರಲಿ ಎಂದರು.
ಇದನ್ನೂ ಓದಿ : ಸಾಂತ್ವನ ವಿಚಾರದಲ್ಲೂ ತಾರತಮ್ಯ ಆರೋಪ: ಮಸೂದ್, ಫಾಝಿಲ್ ನಿವಾಸಕ್ಕೂ ಭೇಟಿ ನೀಡಲಿದ್ದಾರೆ ಸಿಎಂ