ETV Bharat / state

ದೇಗುಲ ತೆರವು ಕಾರ್ಯಚರಣೆಗೆ ತೆರಳಿ ಬರಿಗೈನಲ್ಲಿ ವಾಪಸಾದ ಅಧಿಕಾರಿಗಳು

ರಸ್ತೆ ಮಧ್ಯೆ ಇರುವ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರಿಂ ಕೋರ್ಟ್​ ನೀಡಿದ ನಿರ್ದೇಶನದಂತೆ ಇಲ್ಲಿನ ಕಟ್ಟಡವೊಂದನ್ನು ತೆರವು ಮಾಡಲು ತೆರಳಿದ್ದ ನಗರಸಭೆ ಅಧಿಕಾರಿಗಳು, ಬರಿಗೈನಲ್ಲಿ ವಾಪಸಾದರು.

author img

By

Published : Mar 2, 2020, 10:32 PM IST

ಗಂಗಾವತಿ: ರಸ್ತೆ ಮಧ್ಯೆ ಇರುವ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡುವಂತೆ ಸುಪ್ರಿಂ ಕೋರ್ಟ್​ ನೀಡಿದ ನಿರ್ದೇಶನದಂತೆ ಇಲ್ಲಿನ ಕಟ್ಟಡವೊಂದನ್ನು ತೆರವು ಮಾಡಲು ತೆರಳಿದ್ದ ನಗರಸಭೆ ಅಧಿಕಾರಿಗಳು, ಬರಿಗೈನಲ್ಲಿ ವಾಪಸಾದರು.

ಇಲ್ಲಿನ ಪಂಪಾನಗರ ವೃತ್ತದ ಸಮೀಪ ಇರುವ ರಾಂಪೂರ ಓಣಿಯ ಸಮೀಪದ ರಸ್ತೆಯಲ್ಲಿರುವ ಬನ್ನಿ ಮಹಾಂಕಾಳಿ ದೇಗುಲದ ತೆರವು ಕಾರ್ಯಚರಣೆಗೆ ನಗರಸಭೆ ಸಿಬ್ಬಂದಿ ಪೌರಾಯುಕ್ತ ಎಸ್.ಎಫ್. ಈಳಿಗೇರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ತೆರಳಿದ್ದರು. ಆದರೆ, ಅಲ್ಲಿನ ನಿವಾಸಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ದೇಗುಲಕ್ಕೆ ಅಡ್ಡ ನಿಂತು ಕಾರ್ಯಚರಣೆಗೆ ವಿರೋಧ ವ್ಯಕ್ತಪಡಿಸಿದರು.

ಸ್ಥಳಕ್ಕೆ ಆಗಮಿಸಿದ ನಗರಸಭಾ ಸದಸ್ಯ ವಾಸು ನವಲಿ, ಎರಡು ಗಂಟೆ ಅವಕಾಶ ನೀಡಿದರೆ ಸ್ವಯಂ ಪ್ರೇರಣೆಯಿಂದ ಜನ ಸೇಫ್ಟಿ ಗೇಟ್ ತೆಗೆಯುತ್ತಾರೆ. ಬಳಿಕ ಚರ್ಚೆ ಮಾಡುತ್ತೇವೆ. ಅಲ್ಲಿಯವರೆಗೂ ಸಮಯಾವಕಾಶ ಕೊಡಿ ಎಂದು ನಗರಸಭಾ ಸಿಬ್ಬಂದಿಗೆ ಕೋರಿದರು. ಹೀಗಾಗಿ ಅಧಿಕಾರಿಗಳು ಬರಿಗೈಯಲ್ಲಿ ವಾಪಾಸಾದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.