ಗಂಗಾವತಿ: ಡಿ.25ರಂದು ಕ್ರೈಸ್ತ ಸಮುದಾಯದವರು ಅದ್ಧೂರಿಯಾಗಿ ಆಚರಿಸಲಿರುವ ಕ್ರಿಸ್ಮಸ್ ಹಬ್ಬಕ್ಕೆ ರಾಯಚೂರು-ಲಿಂಗಸಗೂರು ರಸ್ತೆಯಲ್ಲಿರುವ ಬಾಲ ಏಸುವಿನ ಮಂದಿರ ಸಿಂಗಾರಗೊಳ್ಳುತ್ತಿದೆ.
ಕ್ಯಾಥೋಲಿಕ್ ಪಂಥೀಯರ ಆಡಳಿತ ಇರುವ ಇಲ್ಲಿನ ಬಾಲ ಏಸುವಿನ ಮಂದಿರದಲ್ಲಿ ಪ್ರತಿ ವರ್ಷ ಡಿ.24ರ ಮಧ್ಯರಾತ್ರಿ ಪ್ರಾರ್ಥನೆ ಮಾಡಿ ಡಿ.25ರಂದು ಏಸು ಭೂಲೋಕಕ್ಕೆ ಬಂದ ದಿನ ಎಂದು ಸಂಭ್ರಮದಿಂದ ಆಚರಿಸುತ್ತಾರೆ. ಈಗಾಗಲೇ ಏಸುವಿನ ಮಂದಿರದ ಮುಂದೆ ಗುಡಿಸಲು ಮಾದರಿ ತಯಾರಿಸಲು ಸಿದ್ಧತೆ ನಡೆದಿದೆ. ಮಿಕ್ಕಂತೆ ಎಲ್ಲೆಡೆ ಸುಣ್ಣಬಣ್ಣ ಬಳಿದು ಬಾಲ ಏಸುವಿನ ಮಂದಿರವನ್ನು ಸಿಂಗರಿಸುವ ಕಾಯಕದಲ್ಲಿ ಕಾರ್ಮಿಕರು ತಲ್ಲೀನವಾಗಿದ್ದಾರೆ.