ಕೊಪ್ಪಳ : ಜನ್ಮದಿನ ಆಚರಣೆಗಾಗಿ ಸಂಗ್ರಹಿಸಿದ್ದ ಹಣವನ್ನು ಮಕ್ಕಳಿಬ್ಬರು ಶ್ರೀ ಗವಿಮಠಕ್ಕೆ ದೇಣಿಗೆ ನೀಡಿದ್ದಾರೆ.
ಶ್ರೀ ಗವಿಮಠದಲ್ಲಿ ಕೊರೊನಾ ಕೋವಿಡ್ ಸೆಂಟರ್ ಆರಂಭಿಸಿದ ಹಿನ್ನೆಲೆಯಲ್ಲಿ ಕೊಪ್ಪಳ ನಗರದ ನಿವಾಸಿಗಳಾದ ಚಿನ್ಮಯಿ ಹಾಗೂ ಸಿಂಚನಾ ಜನ್ಮದಿನ ಆಚರಣೆಗಾಗಿ ಸಂಗ್ರಹಿಸಿದ್ದ 5,000 ರೂ. ದೇಣಿಗೆ ನೀಡಿದ್ದಾರೆ.
ಕೊರೊನಾ ಸೊಂಕು ಹರಡುವಿಕೆ ಹೆಚ್ಚಾಗಿದೆ. ಹೀಗಾಗಿ, ಶ್ರೀಗಳು ಮಠದ ವತಿಯಿಂದ ಕೋವಿಡ್ ಕೇರ್ ಸೆಂಟರ್ ಆರಂಭಿಸಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಗವಿ ಶ್ರೀಗಳು ಮಾಡಿದ್ದಾರೆ.
ಆ ಕಾರಣಕ್ಕೆ ಹುಟ್ಟುಹಬ್ಬಕ್ಕೆ ಸಂಗ್ರಹಿಸಿದ ನಮ್ಮ ಅಲ್ಪಕಾಣಿಕೆಯನ್ನು ಪೂಜ್ಯರು ಸ್ವೀಕರಿಸಬೇಕೆಂದು ಮಕ್ಕಳು ಪತ್ರ ಬರೆದಿದ್ದಾರೆ.
ಓದಿ: ಬೆಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ 20,000ಕ್ಕೂ ಹೆಚ್ಚು ವಾಹನಗಳು ಸೀಜ್!