ETV Bharat / state

ತೆರೆದ ಚರಂಡಿಗೆ ಬಿದ್ದ ಬಾಲಕಿ: ತಲೆಗೆ ಗಂಭೀರ ಗಾಯ - girl who fell into the open drain of the sewer in gangavati

ಆಟವಾಡುತ್ತಾ ಹೋಗಿ ಒಳಚರಂಡಿ ಮ್ಯಾನ್ ಹೋಲ್ ಗುಂಡಿಗೆ ಬಿದ್ದ ಮಗುವಿಗೆ ತಲೆ, ಮುಖ, ಕೈ ಹಾಗೂ ದೇಹಕ್ಕೆ ತೀವ್ರವಾಗಿ ಪೆಟ್ಟಾಗಿರುವ ಘಟನೆ ಗಂಗಾವತಿ ನಗರದ 31ನೇ ವಾರ್ಡ್​ನ ಚಲುವಾದಿ ಓಣಿಯಲ್ಲಿ ನಡೆದಿದೆ.

child-fell-into-a-manhole-in-gangavati
ಸಾನು ಕೃಷ್ಣ
author img

By

Published : Jan 29, 2021, 7:17 PM IST

ಗಂಗಾವತಿ: ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಪುಟ್ಟ ಮಗುವೊಂದು ಮ್ಯಾನ್ ಹೋಲ್​ಗೆ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.

ನಗರದ 31ನೇ ವಾರ್ಡ್​ನ ಚಲುವಾದಿ ಓಣಿಯಲ್ಲಿನ ಅಖಂಡೇಶ್ವರ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಸಾನು ಕೃಷ್ಣ ಎಂಬ ಮೂರು ವರ್ಷದ ಪುಟ್ಟ ಮಗು ಆಟವಾಡುತ್ತಾ ಹೋಗಿ ಒಳಚರಂಡಿ ಮ್ಯಾನ್ ಹೋಲ್ ಗುಂಡಿಗೆ ಬಿದ್ದಿದೆ.

ಅದೃಷ್ಟವಶಾತ್ ಮಗು ಬಿದ್ದು ಅಳುತ್ತಿರುವ ಸದ್ದು ಕೇಳಿ ತಕ್ಷಣ ಸ್ಥಳೀಯ ಯುವಕನೊಬ್ಬ ಗುಂಡಿಗೆ ಇಳಿದು ಮಗುವನ್ನು ರಕ್ಷಿಸಿದ್ದಾರೆ. ಮಗುವಿಗೆ ತಲೆ, ಮುಖ, ಕೈ ಹಾಗೂ ದೇಹಕ್ಕೆ ಪೆಟ್ಟಾಗಿದೆ. ಒಳಚರಂಡಿ ಕಾಮಗಾರಿಯ ಬಳಿಕ ಗುಂಡಿಗಳನ್ನು ಕಳೆದ ಮೂರು ನಾಲ್ಕು ದಿನಗಳಿಂದ ತೆಗೆಯಲಾಗಿದೆ.

ಓದಿ: ಜ. 31ಕ್ಕೆ ಪೋಲಿಯೋ ಲಸಿಕೆ ಕಾರ್ಯಕ್ರಮ ಆಯೋಜನೆ: ಸಚಿವ ಸುಧಾಕರ್

ಈಗಾಗಲೇ ಒಳಚರಂಡಿಯ ಮಾರ್ಗದಲ್ಲಿ ತ್ಯಾಜ್ಯ ನೀರು ಹರಿಯುತ್ತಿದೆ. ನೀರಿನ ಪ್ರಮಾಣ ಹೆಚ್ಚಾಗಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯ ಇತ್ತು. ಹೀಗಾಗಿ ನಿರ್ಲಕ್ಷ್ಯ ವಹಿಸಿದ ಗುತ್ತಿಗೆದಾರನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಥಳೀಯ ಯುವಕ ಹುಸೇನಪ್ಪ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.