ETV Bharat / state

ಕೋವಿಡ್​ ನಡುವೆ ಕುಷ್ಟಗಿಯಲ್ಲಿ ಚಿಕೂನ್​ ಗುನ್ಯಾ ಭೀತಿ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಬಚನಾಳ ಗ್ರಾಮದಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದೆ. ಇದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ಕುಷ್ಟಗಿ
ಕುಷ್ಟಗಿ
author img

By

Published : Aug 24, 2020, 5:28 PM IST

ಕುಷ್ಟಗಿ(ಕೊಪ್ಪಳ): ಕೊರೊನಾ ಭೀತಿ ನಡುವೆ ತಾಲೂಕಿನಲ್ಲಿ ಚಿಕೂನ್ ಗುನ್ಯಾ ಜ್ವರ ಕಾಣಿಸಿಕೊಂಡಿದ್ದು, ಜನರನ್ನು ಆತಂಕಕ್ಕೀಡು ಮಾಡಿದೆ. ಇದರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ

ಬಚನಾಳ ಗ್ರಾಮದ ಈಶ್ವರ ದೇವಸ್ಥಾನದ ಹಿಂಭಾಗದ ಪ್ರದೇಶದಲ್ಲಿ ಕಳೆದ ಜುಲೈ ತಿಂಗಳಿನಿಂದ ಕ್ರಮೇಣ ಜ್ವರದ ಪ್ರಕರಣಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ 38 ಪ್ರಕರಣಗಳಲ್ಲಿ ಚಿಕೂನ್ ಗುನ್ಯಾದ 5 ಸಂಶಯಾಸ್ಪದ ಪ್ರಕರಣಗಳು ಕಂಡು ಬಂದಿದ್ದು, ಮಾದರಿ ಪರೀಕ್ಷೆಯಲ್ಲಿ 2 ನೆಗೆಟಿವ್ ಬಂದಿದೆ. ಜು.30ರಿಂದ ಆ.1ರವರೆಗೆ ಗ್ರಾಮದಲ್ಲಿ 186 ಮನೆಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗಿದ್ದು, ಅದರಲ್ಲಿ 12 ಕಡೆ ಕಂಡು ಬಂದ ಲಾರ್ವಾಗಳನ್ನು ನಾಶಪಡಿಸಲಾಗಿದೆ.

ಆಗಸ್ಟ್ ತಿಂಗಳಿನಲ್ಲಿ 33 ಜ್ವರ ಪ್ರಕರಣಗಳು ಕಂಡು ಬಂದಿದ್ದು, ಸದ್ಯ ನಿಯಂತ್ರಣದಲ್ಲಿದೆ. ಗ್ರಾಮದಲ್ಲಿ ಚಿಕೂನ್ ಗುನ್ಯಾ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮೂರು ಬಾರಿ ಜ್ವರ ಪರೀಕ್ಷೆ ನಡೆಸಲಾಗಿದೆ ಎಂದು ಮಲೇರಿಯಾ ತಾಂತ್ರಿಕ ಮೇಲ್ವಿಚಾರಕ ಪ್ರಕಾಶ ಗುತ್ತೇದಾರ ಮಾಹಿತಿ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.