ಗಂಗಾವತಿ: ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಬಳಿಕ ನಡೆದ ಗಲಾಟೆಯಲ್ಲಿ ಕನಕಗಿರಿ ತಾಲೂಕು ಪಂಚಾಯಿತಿ ಸದಸ್ಯ ಬಸವಂತಗೌಡ ಪಾಟೀಲ್ ಸೇರಿದಂತೆ 22ಕ್ಕೂ ಹೆಚ್ಚು ಜನರ ಮೇಲೆ ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: 'ರಾಬರ್ಟ್' ಸಿನಿಮಾ ವಿವಾದ...ಫಿಲ್ಮ್ ಚೇಂಬರ್ ಅಧ್ಯಕ್ಷರ ಜೊತೆ ದರ್ಶನ್ ಚರ್ಚೆ...!
ಚಿಕ್ಕಮಾದಿನಾಳ ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪಣ್ಣ ವಿರೂಪಾಕ್ಷಪ್ಪ ಗಿಡ್ಡಿ ಈ ಬಗ್ಗೆ ದೂರು ನೀಡಿದ್ದು, ಚುನಾವಣೆಯಲ್ಲಿ ಪಂಚಾಯಿತಿ ಅಧಿಕಾರ ತಪ್ಪಲು ನೀನು ಕಾರಣ ಎಂದು ಆರೋಪಿಸಿ ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಚುನಾವಣೆಯ ಬಳಿಕ ದೇವಸ್ಥಾನಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಏಕಾಏಕಿ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ.

ಪರಿಣಾಮ ಚಾಲಕ ಹಾಗೂ ನಮ್ಮ ಬೆಂಬಲಿಗರಾದ ವೆಂಕಟೇಶ ಮರಸಿವಾಮಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ ಎಂದು ದೂರುದಾರ ಆರೋಪಿಸಿದ್ದಾರೆ.