ಗಂಗಾವತಿ: ತಾಲೂಕಿನ ಹಣವಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ತ ಹತ್ತಾರು ಮಕ್ಕಳು 15 ರಿಂದ 20 ಅಡಿ ಎತ್ತರದ ಕೋಲಿನ ಬಾವುಟ ಹಿಡಿದು ಗಮನ ಸೆಳೆದರು.
ಗ್ರಾಮದ ಹೊಳೆಯಿಂದ ಆರಂಭವಾದ ಕಳಶ, ಕನ್ನಡ ಮೆರವಣಿಗೆ ಅಂಬೇಡ್ಕರ್ ವೃತ್ತವಾಗಿ ಸಾಗಿ ಬಸವೇಶ್ವರ ದೇವಸ್ಥಾನಕ್ಕೆ ತೆರಳಿತು. ತೆರೆದ ವಾಹನದಲ್ಲಿ ಕಿತ್ತೂರು ರಾಣಿ ಚೆನ್ನಮ್ಮನ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಯಿತು.
ಜಯಂತಿಯಲ್ಲಿ ಪಾಲ್ಗೊಂಡ ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಕಿತ್ತೂರು ರಾಣಿಯ ಶೌರ್ಯವನ್ನು ಎಲ್ಲ ಮಹಿಳೆಯರು, ಅದರಲ್ಲೂ ವಿದ್ಯಾರ್ಥಿನಿಯರು, ಯುವತಿಯರು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.