ETV Bharat / state

ದೇವರ ಹೆಸರಲ್ಲಿ ಗೊರವಪ್ಪ ವೇಷ, ಜನರಿಗೆ ಮೋಸ: ಗ್ರಾಮಸ್ಥರಿಂದ ಥಳಿತ

ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಗೊರವಪ್ಪ ವೇಷಧಾರಿಗಳನ್ನು ಹಿಡಿದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಗೊರವಪ್ಪ ವೇಷಧಾರಿಗಳಿಗೆ ಗ್ರಾಮಸ್ಥರಿಂದ ಗೂಸಾ
author img

By

Published : Aug 23, 2019, 11:24 AM IST

ಕೊಪ್ಪಳ: ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಗೊರವಪ್ಪ ವೇಷಧಾರಿಗಳನ್ನು ಹಿಡಿದ ಜನರು ಹಿಗ್ಗಾಮುಗ್ಗಾ ಗೂಸಾ ನೀಡಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ನಡೆದಿದೆ.

ಗೊರವಪ್ಪ ವೇಷಧಾರಿಗಳಿಗೆ ಗ್ರಾಮಸ್ಥರಿಂದ ಗೂಸಾ

ಮೈಲಾರಲಿಂಗೇಶ್ವರನ ಭಕ್ತರ ವೇಷದಲ್ಲಿ ಬರುತ್ತಿದ್ದ ಮೂರು ಜನ ವ್ಯಕ್ತಿಗಳು, ಯಡ್ಡೋಣಿ ಗ್ರಾಮದ ಮನೆ ಮನೆಗೆ ಬಂದು, ದೇವರ ಹೆಸರಲ್ಲಿ ಭಂಡಾರ ಹಚ್ಚಿ ವಶೀಕರಣ ಮಾಡಿಕೊಂಡು ಜನರಿಂದ ಹಣ ಕೀಳುತ್ತಿದ್ದರಂತೆ. ಗ್ರಾಮದ ಪ್ರತಿಯೊಬ್ಬರಿಂದಲೂ 500 ರಿಂದ 3,000 ಸಾವಿರ ರೂಪಾಯಿವರೆಗೂ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.

ನಂತರ ಇವರ ಅಸಲಿ ಬಣ್ಣ ಅರಿತ ಗ್ರಾಮಸ್ಥರು ಹಿಡಿದು ಥಳಿಸಿ ಜನರು ನೀಡಿದ ಹಣವನ್ನು ವಾಪಸ್​ ಪಡೆದುಕೊಂಡಿದ್ದಾರೆ. ಅಲ್ಲದೆ, ಮತ್ತೆ ಈ ರೀತಿ ಮೋಸ ಮಾಡಿ ಬದುಕಬೇಡಿ ಎಂದು ಅವರನ್ನು ಬಿಟ್ಟು ಕಳಿಸಿದ್ದಾರೆ.

Intro:Body:ಕೊಪ್ಪಳ:- ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಗೊರವಪ್ಪ ವೇಷಧಾರಿಗಳನ್ನು ಜನರು ಹಿಡಿದು ಗೂಸಾ ನೀಡಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ನಡೆದಿದೆ. ಮೈಲಾರಲಿಂಗೇಶ್ವರ ದೇವರ ಭಕ್ತರ ವೇಷದಲ್ಲಿ ಬರುತ್ತಿದ್ದ ಮೂರು ಜನ ವ್ಯಕ್ತಿಗಳು ಯಡ್ಡೋಣಿ ಗ್ರಾಮದ ಮನೆ ಮನೆಗೆ ಬಂದು ದೇವರ ಹೆಸರೆಳಿ ಭಂಡಾರ ಹಚ್ಚಿ ವಶೀಕರಣ ಮಾಡಿಕೊಂಡು ಜನರಿಂದ ಹಣ ಕೇಳಿದಷ್ಟು ಹಣ ಕೀಳುತ್ತಿದ್ದರು. ಒಬ್ಬೊಬ್ಬರಿಂದ 500 ರಿಂದ 3000 ಸಾವಿರ ರುಪಾಯಿವರೆಗೂ ಹಣ ಕೀಳುತ್ತಿದ್ದರು‌. ಗ್ರಾಮದ ಜನರಿಂದ 12000 ಸಾವಿರ ರುಪಾಯಿ ಹಣ ಲಪಟಾಯಿಸಿದ್ದರು ಎಂದು ಗ್ರಾಮಸ್ಥರು ದೂರಿದ್ದಾರೆ. ಇವರ ಅಸಲಿ ಬಣ್ಣ ತಿಳಿದ ಕೆಲವರಿಂದ ಎಚ್ಚೆತ್ತ ಗ್ರಾಮಸ್ಥರು ಆ ಗೊರವಪ್ಪ ವೇಷಧಾರಿಗಳನ್ನು ಕರೆಸಿ ಹಣ ವಾಪಸ್ ಪಡೆದು ಧರ್ಮದೇಟು ನೀಡಿದ್ದಾರೆ ಎನ್ನಲಾಗಿದೆ. ಅಲ್ಲದೆ, ಇನ್ನೊಮ್ಮೆ ಇಂತಹ ಕೆಲಸ ಮಾಡದಂತೆ ಎಚ್ಚರಿಕೆ ನೀಡಿ ಅವರನ್ನು ವಾಪಾಸ್ ಬಿಟ್ಟು ಕಳಿಸಿದ್ದಾರೆ ಎಂದು ತಿಳಿದು ಬಂದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.