ಕೊಪ್ಪಳ : ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ನಗರದ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮವನ್ನು ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಅಪ್ಪಟ ದೇಶ ಭಕ್ತ ಹೋರಾಟಗಾರನ ಜಯಂತಿ ಆಚರಣೆ ಶ್ಲಾಘನೀಯ. ನಮ್ಮ ಭಾರತ ಭೂಮಿಯಲ್ಲಿ ಧರ್ಮದ ರಕ್ಷಣೆ ಮಾಡಿದ ದೇಶಭಕ್ತನೆಂದರೆ ಅದು ಛತ್ರಪತಿ ಶಿವಾಜಿ. ವಿಜಯನಗರ ಸಾಮ್ರಾಜ್ಯ ಅಳಿವಿನ ಬಳಿಕ ಹಿಂದೂ ಧರ್ಮ ರಕ್ಷಣೆ ಮಾಡುವವರು ಇಲ್ಲದ ಸಂದರ್ಭದಲ್ಲಿ ಶಿವಾಜಿ ಮಹಾರಾಜರು ಹಿಂದೂ ಧರ್ಮ ರಕ್ಷಣೆಗೆ ಮುಂದಾದರು.
ಶಿಕ್ಷಣ, ಸಂಘಟನೆ ಹಾಗೂ ಹೋರಾಟದ ಮೂಲಕ ಸಮಾಜದ ಹಕ್ಕು ಪಡೆದು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚಿಸುವ ಮೂಲಕ ಎಲ್ಲ ಜನರು ಸಂವಿಧಾನಾತ್ಮಕ ಹಕ್ಕು ಪಡೆಯುವಂತಾಗಿದೆ. ಸಮಾಜದ ಅಭಿವೃದ್ದಿಗಾಗಿ ಶಾಸಕರ ಅನುದಾನದಲ್ಲಿ 10 ಲಕ್ಷ ರೂಪಾಯಿ ನೀಡುತ್ತೇನೆ. ಈಗಾಗಲೇ 5 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ.
ವೇದಿಕೆ ಕಾರ್ಯಕ್ರಮದ ಬಳಿಕ ಶಿವಾಜಿ ಭಾವಚಿತ್ರ ಮೆರವಣಿಗೆ ಹೊತ್ತು ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು, ಶಿವಾಜಿ ವೇಷ ಧರಿಸಿದ ಮಕ್ಕಳು ಕುಂಬ ಹೊತ್ತ ಮಹಿಳೆಯರು ಭಾಗಿಯಾಗಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.