ETV Bharat / state

ಕೊರೊನಾ ಹಾವಳಿ ಮಧ್ಯೆ ನಾಗರ ಪಂಚಮಿ: ಮಂಕಾದ ಗ್ರಾಮೀಣ ಕ್ರೀಡೆಗಳು - ನಾಗರ ಪಂಚಮಿ-2020

ಕೊರೊನಾ ಭಯದಿಂದ ಕೊಪ್ಪಳ ಜಿಲ್ಲೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಸರಳವಾಗಿ ಆಚರಿಸಲಾಗಿತು. ಆದರೆ, ಪಂಚಮಿ ಸಂದರ್ಭದಲ್ಲಿ ಗರಿಗೆದರುತ್ತಿದ್ದ ಗ್ರಾಮೀಣ ಕ್ರೀಡೆಗಳಿಗೆ ಈ ಬಾರಿ ಮಂಕು ಆವರಿಸಿದೆ.

Celebration of Nagara Panchami in Koppal
ಕ್ರೀಡೆಗಳಲ್ಲಿ ತೊಡಗಿರುವ ಯುವಕರು
author img

By

Published : Jul 24, 2020, 4:27 PM IST

ಕೊಪ್ಪಳ: ಜಿಲ್ಲೆಯಲ್ಲಿ ಪ್ರತಿ ಬಾರಿಯೂ ನಾಗರ ಪಂಚಮಿಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿತ್ತು. ಆದರೆ, ಈ ಬಾರಿ ಕೊರೊನಾ ಭೀತಿಯು ಈ ಎಲ್ಲ ಸಂಭ್ರಮಕ್ಕೆ ಬ್ರೇಕ್ ಹಾಕಿದೆ. ಅಲ್ಲದೆ, ಗ್ರಾಮೀಣ ಕ್ರೀಡೆಗಳಿಗೂ ಮಂಕು ಕವಿದಿದೆ.

ನಾಗರ ಪಂಚಮಿ ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಯುವಕರು ತಮ್ಮದೇ ಆದ ಗ್ರಾಮೀಣ ಕ್ರೀಡೆಗಳಲ್ಲಿ ತೊಡಗುವ ಮೂಲಕ ಹಬ್ಬಕ್ಕೆ ಕ್ರೀಡಾ ಮೆರಗು ನೀಡುತ್ತಾರೆ. ಈ ಹಬ್ಬದಲ್ಲಿ ವಿವಿಧ ರೀತಿಯ ಮೋಜಿನ, ಶಕ್ತಿ-ಯುಕ್ತಿ ಪ್ರದರ್ಶನದಂತಹ ಅಪ್ಪಟ ಗ್ರಾಮೀಣ ಆಟಗಳನ್ನು ಆಡುತ್ತಾರೆ.

ಕ್ರೀಡೆಗಳಲ್ಲಿ ತೊಡಗಿರುವ ಯುವಕರು

ನಿಂಬೆ ಹಣ್ಣು ಎಸೆತ, ಕಣ್ಣು ಕಟ್ಟಿಕೊಂಡು ನಿರ್ದಿಷ್ಟ ಸ್ಥಳ ತಲುಪುವುದು, ಬಂಡಿ ಗಾಲಿ ಎತ್ತುವುದು ಸೇರಿದಂತೆ ಕೆಲವೇ ಕ್ರೀಡೆಗಳು ಮಾತ್ರ ಇಂದು ಕಂಡು ಬಂದವು. ಕೊರೊನಾ ಭೀತಿಯಿಂದಾಗಿ ಈ ಬಾರಿ ಗ್ರಾಮೀಣ‌ ಕ್ರೀಡೆಗಳ ಕಲರವ ಕಡಿಮೆಯಾಗಿದೆ.

ನಾಗರ ಪಂಚಮಿ ಹೆಸರೇ ಸೂಚಿಸುವಂತೆ ಈ ಹಬ್ಬದಂದು ಕಲ್ಲು ನಾಗರಕ್ಕೆ ಹಾಲೆರೆದು ಭಕ್ತಿಯಿಂದ ಪೂಜಿಸಲಾಗುತ್ತದೆ. ಮನೆ, ಮರಗಳಿಗೆ ಜೋಕಾಲಿ ಕಟ್ಟಿ ಹೆಂಗೆಳೆಯರು ಆಟವಾಡುವ ಸಂಪ್ರದಾಯ ಇರುತ್ತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.