ಕೊಪ್ಪಳ: ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಸಿ ಬಿ ಚಿಲ್ಕರಾಗಿ ವಿರುದ್ಧ ಲೋಕೋಪಯೋಗಿ ಇಲಾಖೆಯ ಎಇ ಅರವಿಂದ ಅಣ್ಣಿಗೇರಿ ಕೊಪ್ಪಳ ನಗರ ಠಾಣೆಯಲ್ಲಿ ಜಾತಿ ನಿಂದನೆಯ ದೂರು ದಾಖಲಿಸಿದ್ದಾರೆ.
![caste abuse complaint againest koppal First grade College Principle](https://etvbharatimages.akamaized.net/etvbharat/prod-images/4719751_thumbn.jpg)
ಈ ಹಿಂದೆ ನಡೆಸಿದ ಕಾಮಗಾರಿಗಳ ಗುತ್ತಿಗೆದಾರನಿಂದ ಪರ್ಸೆಂಟೇಜ್ ಕೊಡಿಸದಿದ್ದಕ್ಕೆ ಪ್ರಿನ್ಸಿಪಾಲ್ ಚಿಲ್ಕರಾಗಿ ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಕ್ಷೆಯ ಅಂದಾಜು ಪತ್ರಿಕೆಗೆ ಸಹಿ ಮಾಡಿಸಿಕೊಳ್ಳಲು ಎಇ ಅರವಿಂದ ಅಣ್ಣಿಗೇರಿ ಅವರು ಪ್ರಿನ್ಸಿಪಾಲ್ ಚಿಲ್ಕರಾಗಿ ಬಳಿ ಹೋದಾಗ ಈ ಹಿಂದೆ ನಿರ್ಮಾಣ ಮಾಡಿದ್ದ ಕೊಠಡಿಗಳ ಪರ್ಸೆಂಟೇಜ್ನ ಪ್ರಿನ್ಸಿಪಾಲ್ ಕೇಳಿದ್ರು. ಅಲ್ಲದೇ ನನಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ಲೋಕೋಪಯೋಗಿ ಇಲಾಖೆಯ ಎಇ ಅರವಿಂದ ಅಣ್ಣಗೇರಿ ಕೊಪ್ಪಳ ನಗರ ಠಾಣೆಯಲ್ಲಿ ಜಾತಿ ನಿಂದನೆ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು, ದೂರು ನೀಡಿ 15 ದಿನ ಕಳೆದರೂ ಪೊಲೀಸ್ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.