ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಮೀಯಾಪುರ ಗ್ರಾಮದಲ್ಲಿ ಮೂರು ವರ್ಷದ ಮಗು ದೇವಸ್ಥಾನ ಪ್ರವೇಶಿಸಿದ ಕಾರಣಕ್ಕೆ ದೇವಾಲಯ ಅಶುದ್ಧಗೊಂಡಿದೆ ಎಂದು ಪಾಲಕರಿಗೆ ದಂಡ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಕುಷ್ಟಗಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚನ್ನದಾಸರ ಸಮುದಾಯದ ಚಂದ್ರಶೇಖರ್ ಶಿವಪ್ಪ ದಾಸರ ಹಾಗೂ ಲಲಿತಾ ದಾಸರ ಅವರ ಪುತ್ರನ ಹುಟ್ಟು ಹಬ್ಬದ ಹಿನ್ನೆಲೆ, ಆಂಜನೇಯ ದೇವಸ್ಥಾನದ ಬಳಿ ಕರೆದೊಯ್ದಿದ್ದರು. ಮಗು ದೇವಸ್ಥಾನ ಪ್ರವೇಶಿಸಿತ್ತು. ದೇವಸ್ಥಾನ ಮೈಲಿಗೆ ಆಗಿದ್ದು, ಅಶುದ್ಧವಾಗಿದೆ ಎಂದು 25 ಸಾವಿರ ರೂ. ದಂಡ ಪಾವತಿಸಲು ಒತ್ತಾಯಿಸಿದ್ದರು.
ಇದನ್ನೂ ಓದಿ: ಕೊಪ್ಪಳದ ಮಿಯಾಪುರ ಗ್ರಾಮದಲ್ಲಿದೆಯಾ ಅಸ್ಪೃಶ್ಯತೆ ಆಚರಣೆ...?
ಅಸ್ಪೃಶ್ಯತೆ ಆಚರಿಸಿದ ಹಿನ್ನೆಲೆ, ಸಮಾಜ ಕಲ್ಯಾಣ ಅಧಿಕಾರಿ ಬಾಲಪ್ಪ ಸಂಗನಾಳ ಸ್ವಯಂಪ್ರೇರಿತ ದೂರಿನ ಮೇರೆಗೆ ಪ್ರಕರಣ ದಾಖಲಾಗಿತ್ತು. ಅದರಂತೆ ಮೀಯಾಪುರ ಗ್ರಾಮದ ಕರಕಪ್ಪ ಪೂಜಾರಿ, ಹನುಮಗೌಡ, ಗವಿಸಿದ್ದಪ್ಪ ಮ್ಯಾಗೇರಿ, ವಿರುಪಾಕ್ಷಗೌಡ ಮ್ಯಾಗೇರಿ, ಶರಣಗೌಡ ಎಂಬುವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಅಸ್ಪೃಶ್ಯತೆ ಆಚರಣೆ, ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ.