ಗಂಗಾವತಿ: ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ಮಾಡಿದ್ದಾರೆಂದು ಇತ್ತೀಚೆಗೆ ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ಎಂಬುವವರು ಕಾಂಗ್ರೆಸ್ ಮುಖಂಡ ಶಂಕರರಾವ್ ಉಂಡಾಳೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಪೌರಾಯುಕ್ತರೇ ತಮ್ಮ ಗಂಡನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವುದಾಗಿ ಶಂಕರರಾವ್ ಉಂಡಾಳೆ ಪತ್ನಿ ಗಿರೀಜಾಬಾಯಿ ಉಂಡಾಳೆ ಪ್ರತಿ ದೂರು ನೀಡಿದ್ದಾರೆ.
ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಇಲಾಹಿ ಕಾಲೋನಿಯಲ್ಲಿ ರಾಜಾಕಾಲುವೆ ಒತ್ತುವರಿಯಾಗಿದೆ. ಈ ಕುರಿತು ಪತಿ ಕಳೆದ ಐದು ವರ್ಷದಿಂದ ಹೋರಾಟ ಮಾಡುತ್ತಿದ್ದಾರೆ. ಸೋಮವಾರ ಸುರಿದ ಮಳೆಗೆ ಕಾಲುವೆಯಲ್ಲಿ ನೀರು ತುಂಬಿ ಜನವಸತಿ ಪ್ರದೇಶಕ್ಕೆ ನುಗ್ಗಿದೆ. ಈ ಕುರಿತು ಪೌರಾಯುಕ್ತರಿಗೆ ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ನೀಡುವಂತೆ ಕೇಳಿದ್ದರಿಂದ ಆಕ್ರೋಶಗೊಂಡ ಅವರು ಸಹಚರೊಂದಿಗೆ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿಯಲ್ಲಿ ವಿಷಪ್ರಾಶನದಿಂದ ಯುವಕ ಸಾವು.. ಆಸ್ಪತ್ರೆಗೆ ಕರೆತಂದ ಯುವತಿ ಮೇಲೆಯೇ ಗುಮಾನಿ!