ETV Bharat / state

ಕೊರೊನಾ ಭೀತಿ: ಕೊಪ್ಪಳದಲ್ಲಿ ಪವಿತ್ರ ರಂಜಾನ್​ ಸಾಮೂಹಿಕ ಪ್ರಾರ್ಥನೆ ರದ್ದು - group prayer

ಕೊರೊನಾ ಭೀತಿ ಇರುವುದರಿಂದ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಕೊಪ್ಪಳ ಪೊಲೀಸ್ ಇಲಾಖೆ, ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಸೂಚನೆ ನೀಡಿತ್ತು. ಈ ಹಿನ್ನೆಲೆ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದಾಗಿದೆ.

ಸಾಮೂಹಿಕ ಪ್ರಾರ್ಥನೆ
ಸಾಮೂಹಿಕ ಪ್ರಾರ್ಥನೆ
author img

By

Published : May 25, 2020, 11:32 AM IST

ಕೊಪ್ಪಳ: ಕೊರೊನಾ ವೈರಸ್ ಭೀತಿ ಹಿನ್ನಲೆ ಕೊಪ್ಪಳದಲ್ಲಿಯೂ ಪವಿತ್ರ ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ರದ್ದು ಮಾಡಲಾಗಿದೆ.

ಪ್ರತಿ ಬಾರಿ ನಗರದ ವಿವಿಧ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯುತ್ತಿತ್ತು. ಆದರೆ ಈ ಬಾರಿ ಕೊರೊನಾ ಭೀತಿ ಇರುವುದರಿಂದ ಸಾಮೂಹಿಕ ಪ್ರಾರ್ಥನೆ ನಡೆಸದಂತೆ ಪೊಲೀಸ್ ಇಲಾಖೆ, ಸಮಾಜದ ಮುಖಂಡರೊಂದಿಗೆ ಸಭೆ ನಡೆಸಿ ಸೂಚನೆ ನೀಡಿತ್ತು. ಈ ಹಿನ್ನೆಲೆ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದಾಗಿದೆ.

ಈದ್ಗಾ ಮೈದಾನಕ್ಕೆ ಬೀಗ

ನಗರಸಭೆ ಬಳಿ ಇರುವ ಈದ್ಗಾ ಮೈದಾನದ ಗೇಟ್​ಗೆ ವಕ್ಫ್ ಬೋರ್ಡ್​ನ ಫ್ಲೆಕ್ಸ್ ಹಾಕಿ ಕೋವಿಡ್-19 ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ರದ್ದು ಮಾಡಲಾಗಿದೆ ಎಂದು ಸೂಚನೆ ನೀಡಲಾಗಿದೆ. ಅಲ್ಲದೆ ಈದ್ಗಾ ಮೈದಾನದ ಮುಂದೆ ಪೊಲೀಸ್ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.