ಗಂಗಾವತಿ: ಹನುಮ ಜನ್ಮ ಸ್ಥಳ ಎಂದು ಖ್ಯಾತಿ ಪಡೆದ ತಾಲ್ಲೂಕಿನ ಚಿಕ್ಕರಾಂಪುರದ ಬಳಿ ಇರುವ ಅಂಜನಾದ್ರಿ ದೇಗುಲಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಆಗಮಿಸಲಿದ್ದಾರೆ.
ಫೆ.20 ರ ಬೆಳಗ್ಗೆ ಕೊಪ್ಪಳದಿಂದ ಗಂಗಾವತಿಗೆ ವಾಹನದ ಮೂಲಕ ಆಗಮಿಸುವ ಅವರು, ಗಾಂಧಿವೃತ್ತ ಇಲ್ಲವೇ ಕೃಷ್ಣ ದೇವರಾಯ ವೃತ್ತದಿಂದ ಹತ್ತು ಕಿಮೀ ದೂರ ಇರುವ ಅಂಜನಾದ್ರಿ ಪರ್ವತಕ್ಕೆ ಕಾಲ್ನಡಿಗೆ ಮೂಲಕ ತೆರಳುವರು.
ಬಳಿಕ ಬೆಟ್ಟದ ಮೇಲೆ ಇರುವ ದೇಗುಲದ ಆವರಣದಲ್ಲಿ ಹಮ್ಮಿಕೊಂಡಿರುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಯಾಗ ಶಾಲೆಯಲ್ಲಿ ವಿಶೇಷ ಹೋಮ ಹಾಗೂ ಹವನ ಹಮ್ಮಿಕೊಳ್ಳಲಾಗಿದ್ದು, ಬಳಿಕ ಅಲ್ಲಿಂದ ಕಾರಟಗಿಗೆ ತೆರಳಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.