ಕೊಪ್ಪಳ: ದೇವರಲ್ಲಿ ಬೇಡಿಕೆಯಿಟ್ಟು ಇಷ್ಟಾರ್ಥ ಈಡೇರಿದಾಗ ಗ್ರಾಮದ ದೇವರಿಗೆ ಹರಕೆ ತೀರಿಸುವುದು ಸಾಮಾನ್ಯ. ಆದರೆ ಇಲ್ಲೊಂದೆಡೆ, ಹರಕೆಯ ಹೆಸರಲ್ಲಿ ಬಿಟ್ಟಿದ್ದ ಕೋಣವನ್ನೇ ಮಾರಾಟ ಮಾಡಲಾಗಿದೆ. ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರದ ಗ್ರಾಮದೇವಿ ಕಂಠಿ ಶ್ರೀದುರ್ಗಮ್ಮಗೆ ಹರಕೆ ಬಿಟ್ಟ ಕೋಣವನ್ನು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ದೊರೆತಿದೆ.
ದೇವರಿಗೆ ಬಿಟ್ಟ ಕೋಣಗಳನ್ನು ಮಾರಾಟ ಮಾಡುವುದು ಕಡಿಮೆ. ಆದರೆ ಗ್ರಾಮದಲ್ಲಿ ಈ ಕೋಣ ಹಲವರಿಗೆ ತೊಂದರೆ ನೀಡಿದೆಯಂತೆ. ಈ ಬಗ್ಗೆ ದೇವಸ್ಥಾನದ ಸಮಿತಿಗೆ ಮನವಿ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು 45,000 ರೂಪಾಯಿಗೆ ಮಾರಾಟ ಮಾಡಿದ್ದಾರೆ.
ಇದನ್ನೂ ಓದಿ :ರಾಣೆಬೆನ್ನೂರು: ಗ್ರಾಮ ದೇವತೆಗೆ ಬಿಟ್ಟ ಕೋಣ ಮಾರಿದ್ದನ್ನು ಪ್ರಶ್ನಿಸಿದ ದಲಿತರಿಗೆ ಇಂಥ ಶಿಕ್ಷೆನಾ!?