ಕೊಪ್ಪಳ : ಯುವತಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ ಆರೋಪದ ಮೇಲೆ ಯುವತಿಯೊಬ್ಬಳು ಆ ಯುವಕನಿಗೆ ರಸ್ತೆಯಲ್ಲೇ ಥಳಿಸಿರುವ ಘಟನೆ ನಗರದ ಜಿಲ್ಲಾಸ್ಪತ್ರೆ ಬಳಿ ನಡೆದಿದೆ.
ತಾಲೂಕಿನ ನರೇಗಲ್ ಗ್ರಾಮದ ವೀರಯ್ಯ ಎಂಬ ಯುವಕ ಯುವತಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದನಂತೆ. ಇದರಿಂದ ರೋಸಿ ಹೋದ ಯುವತಿ ಆತನಿಗೆ ಬಿಸಿಬಿಸಿ ಕಜ್ಜಾಯ ನೀಡಿದ್ದಾಳೆ. ನಿವೇಶನ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯುವಕ ಆ ಯುವತಿಗೆ ಒಂದು ವರ್ಷದಿಂದ ಪರಿಚಯವಾಗಿದ್ದನಂತೆ.
ಆಗಾಗ ಯುವತಿಯೊಂದಿಗೆ ಮಾತನಾಡುತ್ತಾ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ. ಯುವಕ ವೀರಯ್ಯ ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಎಳನೀರು ಮಾರುತ್ತಿರುವ ಸ್ಥಳಕ್ಕೆ ಬಂದಾಗ ಯುವತಿ ಅಲ್ಲಿಯೇ ಗೂಸಾ ನೀಡಿದ್ದಾಳೆ. ಆದರೆ, ಯುವತಿಯನ್ನು ತಾನು ಪ್ರೀತಿಸುತ್ತಿರುವುದಾಗಿ ಹೇಳಿದ್ದಾನೆ ಎನ್ನಲಾಗಿದೆ. ಘಟನೆ ಹಿನ್ನೆಲೆ ನಗರ ಠಾಣೆಯ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.