ETV Bharat / state

'ಬಿಜೆಪಿಯವರೆಂದರೆ ಓಟರ್ ಐಡಿ ಕಳ್ಳರು': ಶಿವರಾಜ್ ತಂಗಡಗಿ ವಾಗ್ದಾಳಿ

author img

By

Published : Dec 4, 2022, 9:32 AM IST

ಕೊಪ್ಪಳ ಜಿಲ್ಲೆಯಲ್ಲಿ 55 ಸಾವಿರ, ಕುಷ್ಟಗಿ ತಾಲೂಕಿನಲ್ಲಿ 15 ಸಾವಿರ ಮತದಾರರ ಹೆಸರು ಡಿಲಿಟ್ ಆಗಿದೆ. ಈಗಲೇ ಮತದಾರರು ಪರೀಕ್ಷಿಸಿಕೊಳ್ಳಿ ಎಂದು ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಶಿವರಾಜ್ ತಂಗಡಗಿ ಹೇಳಿದರು.

Koppal District Congress President Shivraj Thandagi
ಕೊಪ್ಪಳ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಶಿವರಾಜ್ ತಂಗಡಗಿ

ಕುಷ್ಟಗಿ(ಕೊಪ್ಪಳ): ಬಿಜೆಪಿಯವರೆಂದರೆ ಓಟರ್ ಐಡಿ ಕಳ್ಳರು. ಅವರು ಅಷ್ಟು ಸೀಟು, ಇಷ್ಟು ಸೀಟು ಗೆಲ್ತೀವಿ ಅಂತ ಹೇಳುತ್ತಿರುವುದು ಈ ವಾಮಮಾರ್ಗದಿಂದಲೇ ಎಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್​ ಅಧ್ಯಕ್ಷ ಶಿವರಾಜ್ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.

ಶನಿವಾರ ಸಂಜೆ ಇಲ್ಲಿನ ಎಸ್.ಪಿ.ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಕುಷ್ಟಗಿ-ಹನುಮಸಾಗರ ಸಹಯೋಗದಲ್ಲಿ ಎಐಐಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಡಿಸೆಂಬರ್‌ 10ರಂದು ಕಲಬುರಗಿಯಲ್ಲಿ ಗೌರವ ಸನ್ಮಾನ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು.

ಶಿವರಾಜ್ ತಂಗಡಗಿ ವಾಗ್ದಾಳಿ

ಕೊಪ್ಪಳ ಜಿಲ್ಲೆಯಲ್ಲಿ 55 ಸಾವಿರ, ಕುಷ್ಟಗಿ ತಾಲೂಕಿನಲ್ಲಿ 15 ಸಾವಿರ ಮತದಾರರ ಹೆಸರು ಡಿಲಿಟ್ ಆಗಿದೆ. ಈಗಲೇ ಮತದಾರರು ಪರೀಕ್ಷಿಸಿಕೊಳ್ಳಿ. ಬಡವರಿಗೆ, ಶ್ರೀಮಂತರಿಗೆ ಒಂದೇ ಮತಮೌಲ್ಯ ನೀಡಿದ್ದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮತದಾನದ ಶಕ್ತಿಯ ಹಕ್ಕು ನೀಡಿದ್ದು, ಆ ಹಕ್ಕನ್ನು ಬಿಜೆಪಿಯವರು ಕಸಿಯುತ್ತಿದ್ದಾರೆ ಎಂದು ಆರೋಪಿಸಿದರು.

ನಿಧನ ಹೊಂದಿದವರು ಮತ್ತು ಎರಡೆರಡು ಬಾರಿ ನೋಂದಣಿಯಾಗಿರುವವರ ಹೆಸರು ಅಳಿಸಿರುವುದಾಗಿ​ಬಿಜೆಪಿಯವರು ಸಮಾಜಾಯಿಷಿ ನೀಡುತ್ತಿದ್ದಾರೆ. ಈ ವಾಮಮಾರ್ಗದಿಂದ ಗೆಲ್ಲುವ ಹಿನ್ನೆಲೆಯಲ್ಲಿ ನಾವು ಅಷ್ಟು ಸ್ಥಾನ ಇಷ್ಟು ಸ್ಥಾನ ಗೆಲ್ಲುತ್ತೇವೆ ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ತಂಗಡಗಿ ಟೀಕಿಸಿದರು.

ಇದನ್ನೂ ಓದಿ: ಮತದಾರರ ಮಾಹಿತಿ ಕಳವು ಪ್ರಕರಣ: ವಿಚಾರಣೆಗೆ ಹಾಜರಾದ ಐಎಎಸ್ ಅಧಿಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.