ETV Bharat / state

ಬೈಕ್ ಸ್ಕಿಡ್, ಕೊಪ್ಪಳದಲ್ಲಿ ಸರಣಿ ಅಪಘಾತ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ - ಕೊಪ್ಪಳದಲ್ಲಿ ಸರಣಿ ಅಪಘಾತ

ಒಂದು ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಹಿಂದೆ ಹಾಗೂ ಅಕ್ಕಪಕ್ಕದಲ್ಲಿ ಬರುತ್ತಿದ್ದ 4 ಬೈಕ್​ ನಲ್ಲಿದ್ದ ಸವಾರರು ನೆಲಕ್ಕೆ ಉರುಳಿದ ಘಟನೆ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಡೆದಿದೆ.

series accident in Koppal
ಬೈಕ್ ಸ್ಕಿಡ್: ಕೊಪ್ಪಳದಲ್ಲಿ ಸರಣಿ ಅಪಘಾತ
author img

By

Published : Jul 21, 2020, 10:12 AM IST

Updated : Jul 21, 2020, 11:02 AM IST

ಕೊಪ್ಪಳ: ಒಂದು ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಹಿಂದೆ ಹಾಗೂ ಅಕ್ಕಪಕ್ಕದಲ್ಲಿ ಬರುತ್ತಿದ್ದ ಬೈಕ್​ಗಳ ಸವಾರರು ಒಬ್ಬರಾದ ಮೇಲೊಬ್ಬರು ನೆಲಕ್ಕೆ ಉರುಳಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರದಲ್ಲಿ ನಿನ್ನೆ ಮಧ್ಯಾಹ್ನ ನಡೆದಿದೆ.

ಬೈಕ್ ಸ್ಕಿಡ್, ಕೊಪ್ಪಳದಲ್ಲಿ ಸರಣಿ ಅಪಘಾತ

ಘಟನೆಯ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಹಿಳೆಯೊಬ್ಬಳು ಕುಳಿತಿದ್ದ ಬೈಕ್ ಚಲಿಸುತ್ತಿದ್ದಾಗ ಅದರ ಸವಾರ ಎಡಕ್ಕೆ ತಿರುಗಿಸುವ ಪ್ರಯತ್ನ ಮಾಡಿದ್ದಾನೆ. ಇದರಿಂದ ಪಕ್ಕದಲ್ಲಿ ಬರುತ್ತಿದ್ದ ಮತ್ತೊಂದು ಬೈಕ್ ಸವಾರ ಆ ಬೈಕ್​​​​​ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿ ನೆಲಕ್ಕುರುಳಿದ್ದಾನೆ. ಇದಾದ ಕ್ಷಣ ಮಾತ್ರದಲ್ಲಿ ಅಕ್ಕ- ಪಕ್ಕ, ಹಿಂದೆ ಇದ್ದ ಬೈಕ್ ಸೇರಿ ನಾಲ್ಕು ಬೈಕ್​ ನಲ್ಲಿದ್ದ ಸವಾರರು ನೆಲಕ್ಕೆ ಬಿದ್ದಿದ್ದಾರೆ.

ಈ ದೃಶ್ಯ ರಸ್ತೆ ಪಕ್ಕದಲ್ಲಿನ ಅಂಗಡಿಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದೃಷ್ಠವಶಾತ್ ಯಾರಿಗೂ ಅಪಾಯವಾಗಿಲ್ಲ.

Last Updated : Jul 21, 2020, 11:02 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.