ಕೊಪ್ಪಳ: ದ್ವಿಚಕ್ರ ವಾಹನ ಹಾಗೂ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೇರೆ ಬೇರೆ ಶಾಲೆಯ ಇಬ್ಬರು ಶಿಕ್ಷಕರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಬಳಿ ಈ ದುರ್ಘಟನೆ ನಡೆದಿದ್ದು ನಿಖಿತಾ ಬೇಗಂ (35) ಹಾಗೂ ಮಹಮ್ಮದ್ ಸಲಾವುದ್ದಿನ್ (45) ಎಂಬ ಶಿಕ್ಷಕಿ ಮತ್ತು ಶಿಕ್ಷಕ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಮೃತರು ಗಂಗಾವತಿ ತಾಲೂಕಿನ ಬೇರೇ ಬೇರೆ ಉರ್ದು ಶಾಲೆಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಶಿಕ್ಷಕಿ ನಿಖಿತಾ ಬೇಗಂ ಚಿತ್ರದುರ್ಗ ಮೂಲದವರಾಗಿದ್ದರೆ, ಶಿಕ್ಷಕ ಸಲಾವುದ್ದೀನ್ ಬೀದರ್ ಮೂಲದವರಾಗಿದ್ದಾರೆ