ಗಂಗಾವತಿ : ನಗರದಲ್ಲಿ ಬೆಳಗ್ಗೆ ಹಲವರ ಮೇಲೆ ದಾಳಿ ಮಾಡಿ ಪರಾರಿಯಾಗಿದ್ದ ಕರಡಿಯ ಜಾಡು ಪತ್ತೆಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಧ್ಯರಾತ್ರಿ ಎಂಎನ್ಎಂ ಶಾಲೆಯ ಪಕ್ಕದಲ್ಲಿರುವ ಬೆಟ್ಟದಿಂದ ಇಳಿದು ಬಂದಿದ್ದ ಕರಡಿ, ಬಳಿಕ ಸಾರ್ವಜನಿಕ ಸ್ಥಳ, ಓಣಿಗಳಲ್ಲಿ ಓಡಾಡಿದೆ. ಬಳಿಕ ಹೆಚ್ಆರ್ಎಸ್ ಕಾಲೋನಿಯಿಂದ ಸಾರಿಗೆ ಇಲಾಖೆಯ ಬಸ್ ಡಿಪೋಗೆ ಹಿಂಬಂದಿಯ ಗೋಡೆಯಿಂದ ಎಂಟ್ರಿ ಕೊಟ್ಟಿದೆ.
ಕೆಲಕಾಲ ಸಾರಿಗೆ ಘಟಕದಲ್ಲಿ ಓಡಾಡಿದ ಕರಡಿಯನ್ನ ನೋಡಿದ ನಾಯಿಗಳು ಬೊಗಳಲು ಶುರು ಮಾಡಿವೆ. ಇದರಿಂದ ಕಂಗಲಾದ ಕರಡಿ, ಗೇಟ್ ಮೂಲಕ ಓಡಿ ತಪ್ಪಿಸಿಕೊಂಡಿದೆ.
ನಂತರ ಮನೆಯಂಗಳದಲ್ಲಿ ಕಸ ಗೂಡಿಸುತ್ತಿದ್ದ ಹಾಗೂ ರಂಗೋಲಿ ಹಾಕುತ್ತಿದ್ದ ಇಬ್ಬರು ಮಹಿಳೆಯರ ಮೇಲೆರಗಿ ಗಾಯಗೊಳಿಸಿದೆ. ಅಲ್ಲಿಂದ ಮುಂದೆ ಸಾಗಿ ಪೌರಕಾರ್ಮಿಕರ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿತ್ತು. ಸದ್ಯ ಕರಡಿಯ ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.