ETV Bharat / state

ದುರ್ಗಾಬೆಟ್ಟದಲ್ಲಿ ಗೋವಿಗೆ ಮುತ್ತಿಟ್ಟು ಪೂಜೆ ಸಲ್ಲಿಸಿದ ಸಿಎಂ ಬೊಮ್ಮಾಯಿ

author img

By

Published : Aug 1, 2022, 9:40 PM IST

ಆನೆಗೊಂದಿ ಬಳಿಯ ದುರ್ಗಾಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿಢೀರ್ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅಲ್ಲಿ ಪೋಷಿಸಲಾಗುವ ಅನಾಥ ಮತ್ತು ಬಿಡಾಡಿ ಜಾನುವಾರುಗಳ ಬಗ್ಗೆ ಮಾಹಿತಿ ಪಡೆದು, ಗೋ ಗ್ರಾಸ ನೀಡಿ ಪೂಜೆ ಸಲ್ಲಿಸಿದರು.

basavaraj-bommai-did-go-puja-in-koppal
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಗಂಗಾವತಿ(ಕೊಪ್ಪಳ): ಅನಾಥ ಮತ್ತು ಬಿಡಾಡಿ ಜಾನುವಾರುಗಳ ಸಂರಕ್ಷಣೆಯ ತಾಣವಾಗಿರುವ ತಾಲ್ಲೂಕಿನ ಆನೆಗೊಂದಿ ಬಳಿಯ ದುರ್ಗಾಬೆಟ್ಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಸಿಎಂ ನಿಗದಿತ ಕಾರ್ಯಕ್ರಮದ ಪಟ್ಟಿಯಲ್ಲಿ ಗೋಶಾಲೆ ಭೇಟಿ ಇರದಿದ್ದರೂ ಅಲ್ಲಿಗೆ ತೆರಳಿ ಅಚ್ಚರಿ ಮೂಡಿಸಿದರು.

ಈ ಸಂದರ್ಭದಲ್ಲಿ ಗೋಶಾಲೆಯ ಗೋವೊಂದಕ್ಕೆ ಮುತ್ತಿಟ್ಟು ಪೂಜೆ ಸಲ್ಲಿಸಿದ ಬೊಮ್ಮಾಯಿ, ಗೋ ಗ್ರಾಸ ನೀಡಿ ಕಾಣಿಕೆ ತಲುಪಿಸಿದರು. ಗೋಶಾಲೆಯಲ್ಲಿನ ಸುಮಾರು ಐನೂರಕ್ಕೂ ಹೆಚ್ಚು ಹಸುಗಳನ್ನು ಸಂರಕ್ಷಣೆ ಮಾಡಲಾಗುತ್ತಿದ್ದು, ನಿರ್ವಹಣೆಯೇ ಸವಾಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಸಿಎಂ ಗಮನಕ್ಕೆ ತಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಗೋಶಾಲೆ ಸರ್ಕಾರದಿಂದ ನಿರ್ವಹಣೆ ಅಥವಾ ಸರ್ಕಾರದ ಸುಪರ್ದಿಗೆ ಪಡೆಯುವುದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ಮಂಜೂರು ಮಾಡುವ ಬಗ್ಗೆ ಗಮನ ಹರಿಸಲಾಗುವುದು ಎಂದು ಭರವಸೆ ನೀಡಿದರು.

basavaraj-bommai-did-go-puja-in-koppal

ಈ ಸಂದರ್ಭದಲ್ಲಿ ಸಚಿವರಾದ ಭೈರತಿ ಬಸವರಾಜ, ಶಶಿಕಲಾ ಜೊಲ್ಲೆ, ಸುಧಾಕರ್, ಹಾಲಪ್ಪ ಆಚಾರ್, ಸಂಸದ ಕರಡಿ ಸಂಗಣ್ಣ, ಶಾಸಕ ಬಸವರಾಜ ದಢೇಸ್ಗೂರು, ಶಶೀಲ್ ನಮೋಶಿ ಹಾಗು ಮಾಲತಿ ನಾಯಕ್ ಇದ್ದರು.

ಇದನ್ನೂ ಓದಿ : ಅಂಜನಾದ್ರಿಯೇ ಹನುಮನ ಜನ್ಮಸ್ಥಾನ, ಈ ಬಗ್ಗೆ ಘೋಷಣೆ ಅಗತ್ಯವಿಲ್ಲ : ಸಿಎಂ ಬೊಮ್ಮಾಯಿ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.