ETV Bharat / state

ಯತ್ನಾಳ್ 'ಬಾಹುಬಲಿ'ಇದ್ದಂಗೆ.. ನಿರಾಣಿಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಡಿಯೂರಪ್ಪ.. ಶ್ರೀ ಜಯಮೃತ್ಯುಂಜಯ ಸ್ವಾಮೀಜಿ - Basava Jayamrutyunjaya Swamiji

ನಾವು ಅದಕ್ಕಾಗಿ ಪಾದಯಾತ್ರೆ ಮಾಡಿಲ್ಲ‌‌. ಮುರುಗೇಶ ನಿರಾಣಿಗೆ ಮುಖ್ಯಮಂತ್ರಿ ಸ್ಥಾನವನ್ನು ಯಾರು ತಪ್ಪಿಸಿದ್ದಾರೆ ಅನ್ನೋದು ನಿಮಗೂ ಗೊತ್ತಿದೆ. ಯಡಿಯೂರಪ್ಪ ಅವರಿಂದಲೇ ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದೆ ಎಂದು ಸ್ವಾಮೀಜಿ ಆರೋಪಿಸಿದರು..

Basava Jayamrutyunjaya Swamiji
ಬಸವ ಜಯಮೃತ್ಯುಂಜಯ ಸ್ವಾಮೀಜಿ
author img

By

Published : Sep 19, 2021, 3:06 PM IST

ಕೊಪ್ಪಳ : ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಾಹುಬಲಿ ಇದ್ದ ಹಾಗೆ. ಅವರು ಸದನದ ಹೊರಗೂ, ಒಳಗೂ ಗುಡುಗ್ತಾರೆ ಎಂದು ಪಂಚಮಸಾಲಿ ಸಮಾಜದ ಕೂಡಲಸಂಗಮ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಶಾಸಕ್ ಯತ್ನಾಳ್ ಬಗ್ಗೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಬಣ್ಣನೆ..

ಕೊಪ್ಪಳದಲ್ಲಿ ಮಾತನಾಡಿದ ಅವರು, ನಾನು ಮಂತ್ರಿ ಆಗಿಲ್ಲ ಎಂದು ಯಾರೂ ಬೇಜಾರಾಗಬೇಡಿ ಎಂದು ಯತ್ನಾಳ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮಂತ್ರಿಗಿಂತ ಮೀಸಲಾತಿ ಮುಖ್ಯ ಎಂದು ತಿಳಿಸಿದ್ದಾರೆ. ನಮ್ಮವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಅಪೇಕ್ಷೆ ಇತ್ತು. ‌

ಆದರೆ, ನಾವು ಅದಕ್ಕಾಗಿ ಪಾದಯಾತ್ರೆ ಮಾಡಿಲ್ಲ‌‌. ಮುರುಗೇಶ ನಿರಾಣಿಗೆ ಮುಖ್ಯಮಂತ್ರಿ ಸ್ಥಾನವನ್ನು ಯಾರು ತಪ್ಪಿಸಿದ್ದಾರೆ ಅನ್ನೋದು ನಿಮಗೂ ಗೊತ್ತಿದೆ. ಯಡಿಯೂರಪ್ಪ ಅವರಿಂದಲೇ ನಿರಾಣಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದೆ ಎಂದು ಸ್ವಾಮೀಜಿ ಆರೋಪಿಸಿದರು.

ದೇವಸ್ಥಾನಗಳ ತೆರವು ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಸುಪ್ರೀಂಕೋರ್ಟ್ ಆದೇಶವಿದೆ. ಅದು ಅಲ್ಲಿನ ಜಿಲ್ಲಾಡಳಿತಕ್ಕೆ ಸಂಬಂಧಿಸಿದ್ದು. ನಾನು ಅದಕ್ಕೆ ಯಾಕೆ ಪ್ರತಿಕ್ರಿಯೆ ನೀಡಲಿ. ದೇವಸ್ಥಾನ, ಮಸೀದಿ ಬಗ್ಗೆ ನಾನು ಮಾತನಾಡುವುದರಿಂದ ವಿಷಯ ಗೊಂದಲವಾಗುತ್ತದೆ. ಎಲ್ಲರಿಗೂ ಕಾನೂನು ಒಂದೇ ರೀತಿ ಇರಲಿ ಎಂದು ಸ್ವಾಮೀಜಿ ಹೇಳಿದರು.

ಇದನ್ನೂ ಓದಿ: ಪ್ರತಿಪಕ್ಷಗಳಿಗೆ ಶಕ್ತಿ ತಂತ್ರಗಾರಿಕೆ ಇರುತ್ತದೆ, ಹಗುರವಾಗಿ ತೆಗೆದುಕೊಳ್ಳಬೇಡಿ: ಕಾರ್ಯಕರ್ತರಿಗೆ ಬಿಎಸ್​ವೈ ಸಂದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.