ಕುಷ್ಟಗಿ (ಕೊಪ್ಪಳ): ತಾಲೂಕಿನ ನೊಣಗಳ ಪೀಡಿತ ಕಡೆಕೊಪ್ಪ ಗ್ರಾಮಕ್ಕೆ ಸಹಾಯಕ ಆಯುಕ್ತ ನಾರಾಯಣರಡ್ಡಿ ಕನಕರಡ್ಡಿ ಸೋಮವಾರ ಸಂಜೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು.
ಕಡೇಕೊಪ್ಪ ಸೀಮಾಂತರದಲ್ಲಿರುವ ಮಾಣಿಕ್ಯಂ ಪೌಲ್ಟ್ರಿ ಫಾರಂಗೆ ಭೇಟಿ ನೀಡಿ ಅಲ್ಲಿನ ಮಾಲೀಕ ರಾಮ ಮೋಹನರಾಂ, ಸಿಬ್ಬಂದಿ ಹಾಗೂ ಕಾರ್ಮಿಕರನ್ನು ವಿಚಾರಿಸಿದರು. ನೊಣಗಳ ವಿಪರೀತ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳದಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದ್ದು, ನಿಯಂತ್ರಿಸಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಪೌಲ್ಟ್ರಿ ಫಾರಂ ತೆರವುಗೊಳಿಸಲು ಶಿಫಾರಸು ಮಾಡುವುದಾಗಿ ಎಚ್ಚರಿಸಿದ ಸದರಿ ಮಾಲೀಕರ ವಿರುದ್ಧ ನೋಟಿಸ್ ಜಾರಿಗೆ ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಸೂಚಿದರು.
ನಂತರ ಕಡೆಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ, ಜನ ಜಾನುವಾರುಗಳು ನೊಣಗಳ ಕಾಟ, ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮದ ಬಗ್ಗೆ ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಿದರು. ಗ್ರಾಮಸ್ಥರು, ನೊಣಗಳ ಕಾಟ ಹೆಚ್ಚಾಗಿ ಜನ ರೊಚ್ಚಿಗೆದ್ದಾಗ ಮಾತ್ರಕ್ಕೆ ಕಾಟಾಚಾರಕ್ಕೆ ಕ್ರಿಮಿನಾಶಕ ಔಷಧ ಸಿಂಪಡಿಸುತ್ತಿದ್ದು, ನೊಣಗಳ ಕಾಟಕ್ಕೆ ಊರು ಬಿಡುವ ಪರಿಸ್ಥಿತಿಯ ಬಗ್ಗೆ ವಿವರಿಸಿದರು.
ಇನ್ನು ಈ ಸಂದರ್ಭದಲ್ಲಿ ತಹಶೀಲ್ದಾರ್ ಎಂ.ಸಿದ್ದೇಶ, ಗ್ರಾಮ ಲೆಕ್ಕಾಧಿಕಾರಿ ರವಿಕುಮಾರ್ ನಾಯಕ್ ಮತ್ತಿತರರಿದ್ದರು.