ಗಂಗಾವತಿ (ಕೊಪ್ಪಳ): ಅಕ್ಟೋಬರ್ 23ರಂದು ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ, ಗಂಗಾವತಿ ತಾಲೂಕಿನಲ್ಲಿ ಸ್ಥಾಪಿಸಲಾದ ಮತಗಟ್ಟೆಗಳಿಗೆ ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
![Assistant Commissioner Narayana Kanaka reddy inspected polling stations](https://etvbharatimages.akamaized.net/etvbharat/prod-images/kn-gvt-02-10-no-ac-visit-election-booths-for-basics-pic-kac10005_10102020183900_1010f_1602335340_449.jpg)
ಮತಕೇಂದ್ರದಲ್ಲಿ ಸೂಕ್ತ ಭದ್ರತೆ ಹಾಗೂ ಶುದ್ಧ ಬೆಳಕು-ಗಾಳಿ ಬರುವಂತೆ ವ್ಯವಸ್ಥೆ ಮಾಡುವಂತೆ ತಹಶೀಲ್ದಾರ್ ರೇಣುಕಾ ಹಾಗೂ ಚುನಾವಣಾ ವಿಭಾಗದ ಸಿಬ್ಬಂದಿಗೆ ಸೂಚನೆ ನೀಡಿದರು. ಕೊರೊನಾದ ಬಳಿಕ ಎದುರಾಗುತ್ತಿರುವ ಮೊದಲ ಚುನಾವಣೆ ಹಿನ್ನೆಲೆ, ಸ್ಯಾನಿಟೈಸರ್, ಸಾಮಾಜಿಕ ಅಂತರ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
![Assistant Commissioner Narayana Kanaka reddy inspected polling stations](https://etvbharatimages.akamaized.net/etvbharat/prod-images/kn-gvt-02-10-no-ac-visit-election-booths-for-basics-pic-kac10005_10102020183900_1010f_1602335340_911.jpg)
ಗಂಗಾವತಿ ನಗರದ ಬಾಲಕರ ಸರ್ಕಾರಿ ಕಾಲೇಜು, ವೆಂಕಟಗಿರಿ, ಮರಳಿ, ಕಾರಟಗಿ ಮತ್ತು ಕನಕಗಿರಿ ಪಟ್ಟಣಗಳಲ್ಲಿನ ಮತಕೇಂದ್ರಗಳಿಗೆ ತೆರಳಿ ವೀಕ್ಷಣೆ ಮಾಡಿದರು.