ಕೊಪ್ಪಳ : ಉತ್ತರ ಕರ್ನಾಟಕದಲ್ಲಿ ಪ್ರವಾಹ ಎದುರಿಸಿದ ಸಂತ್ರಸ್ತರ ನೆರವಿಗಾಗಿ ವೃತ್ತಿರಂಗಭೂಮಿ ಕಲಾವಿದರ ಮನ ಮಿಡಿದಿದ್ದು, ನಗರದಲ್ಲಿ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಿದರು.
ಕೊಪ್ಪಳ ನಗರದಲ್ಲಿ ಕಳೆದೊಂದು ತಿಂಗಳಿನಿಂದ ಕ್ಯಾಂಪ್ ಹಾಕಿರುವ ಜೇವರ್ಗಿಯ ವಿಶ್ವಜ್ಯೋತಿ ಶ್ರೀ ಪಂಚಾಕ್ಷರಿ ನಾಟ್ಯ ಸಂಘದ ಕಲಾವಿದರು ಅಖಿಲ ಕರ್ನಾಟಕ ವೃತ್ತಿರಂಗಭೂಮಿ ಕಲಾವಿದರ ಸಂಘದ ನೇತೃತ್ವದಲ್ಲಿ ಇಂದು ನಗರದ ಬೀದಿಯಲ್ಲಿ ಕುಂಟಕೋಣ, ಮೂಕ ಜಾಣ ನಾಟಕದ ಪ್ರಮುಖ ಹಾಸ್ಯ ಸನ್ನಿವೇಶ ಅಭಿನಯಿಸುವ ಮೂಲಕ ನೆರೆ ಸಂತ್ರಸ್ತರಿಗೆ ನಿಧಿ ಸಂಗ್ರಹಿಸಿದರು.
ನೆರೆಯಿಂದ ಸಾಕಷ್ಟು ಜನರು ತೊಂದರೆಗೀಡಾಗಿದ್ದಾರೆ. ಈ ನಿಟ್ಟಿನಲ್ಲಿ ನೆರವು ಅಗತ್ಯವಾಗಿದೆ. ಉದಾರಿಗಳಾದ ಜನರು ನೆರವು ನೀಡುವಂತೆ ಕಲಾವಿದರು ಈ ಸಂದರ್ಭದಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿ ನಿಧಿ ಸಂಗ್ರಹಿಸಿದರು.