ಹೊಸಪೇಟೆ : ಐತಿಹಾಸಿಕ ಹಂಪಿಯ ವಿಜಯನಗರ ವೈಭವದ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ಆಯ್ಕೆಯಾದ ಕಲಾವಿದರಿಗೆ ಹೊಸಪೇಟೆಯ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ತರಬೇತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಲಕ್ಷ್ಮಣ ಸವದಿ, ಕಾರ್ಯಕ್ರಮಕ್ಕೆ ಆಯ್ಕೆಯಾದ ಕಲಾವಿದರು ಉತ್ತಮ ಪ್ರದರ್ಶನ ನೀಡಬೇಕು ಎಂದು ಪ್ರೋತ್ಸಾಹಿಸಿದರು.
ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕೆ ನೂರಾರು ಸ್ಥಳೀಯ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೆ ತರಬೇತಿ ನೀಡಲಾಗುತ್ತಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಜನಮಾನಸದಲ್ಲಿ ಉಳಿಯುವಂತಹ ಪ್ರದರ್ಶನ ನೀಡುಬೇಕು. ಹಂಪಿ ಉತ್ಸವ ವೀಕ್ಷಣೆಗೆ ಆಗಮಿಸಿದ ಜನರ ಮನಸೂರೆಗೊಳಿಸುವಂತೆ ಪ್ರದರ್ಶನ ನೀಡಬೇಕು ಎಂದು ಕಲಾವಿದರಿಗೆ ಆತ್ಮವಿಶ್ವಾಸ ತುಂಬಿದರು.