ETV Bharat / bharat

ತ್ರಿಪುರಾ: ಶಸ್ತ್ರಾಸ್ತ್ರ ತ್ಯಾಗಕ್ಕೆ ಸಜ್ಜಾದ 400 ಉಗ್ರರು - Tripura Militants To Lay Down Arms

author img

By ETV Bharat Karnataka Team

Published : 3 hours ago

ನ್ಯಾಷನಲ್​ ಲಿಬರೇಷನ್​ ಫ್ರಂಟ್​ ಆಫ್​ ತ್ರಿಪುರಾ (ಎನ್​ಎಲ್​ಎಫ್​ಟಿ) ಮತ್ತು ಆಲ್​ ತ್ರಿಪುರಾ ಟೈಗರ್​ ಫೋರ್ಸ್​ (ಎಟಿಟಿಎಫ್​) ಉಗ್ರರು ಶಸಾಸ್ತ್ರ ತ್ಯಜಿಸಲು ನಿರ್ಧರಿಸಿದ್ದಾರೆ.

around-400-militants-will-lay-down-their-arms-before-tripur-cm
ಸಂಗ್ರಹ ಚಿತ್ರ (ANI)

ಅಗರ್ತಲಾ: ಮಹತ್ವದ ಬೆಳವಣಿಗೆಯಲ್ಲಿ ನ್ಯಾಷನಲ್​ ಲಿಬರೇಷನ್​ ಫ್ರಂಟ್​ ಆಫ್​ ತ್ರಿಪುರಾ (ಎನ್​ಎಲ್​ಎಫ್​ಟಿ) ಮತ್ತು ಆಲ್​ ತ್ರಿಪುರಾ ಟೈಗರ್​ ಫೋರ್ಸ್​ (ಎಟಿಟಿಎಫ್​) ಸಂಘಟನೆಗಳ 400 ಉಗ್ರರು ತಮ್ಮ ಶಸ್ತ್ರಾಸ್ತ್ರ ತ್ಯಜಿಸಲು ತೀರ್ಮಾನಿಸಿದ್ದಾರೆ. ಸೆಪಹಿಜಾಲಾ ಜಿಲ್ಲೆಯಲ್ಲಿ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಅವರೆದುರು ಶಸಾಸ್ತ್ರ ತ್ಯಜಿಸಲಿದ್ದಾರೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿದೆ.

ದೆಹಲಿಯಲ್ಲಿ ಸೆಪ್ಟಂಬರ್​ 4ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ಬೆಳವಣಿಗೆ ನಡೆದಿದೆ.

ಎನ್​ಎಲ್​ಎಫ್​ಟಿ ಮತ್ತು ಎಟಿಟಿಎಫ್​ನ ನಾಲ್ನೂರು ಮಂದಿ ಜಂಪೂಯಿಜಾಲಾದಲ್ಲಿರುವ ತ್ರಿಪುರಾ ಸ್ಟೇಟ್ ರೈಫಲ್ಸ್ (ಟಿಎಸ್‌ಆರ್)ನ 7ನೇ ಬೆಟಾಲಿಯನ್‌ನ ಪ್ರಧಾನ ಕಚೇರಿಯಲ್ಲಿ ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗಲಿದ್ದಾರೆ ಎಂದು ಗೃಹ ಇಲಾಖೆ ಪ್ರಕಟಣೆ ತಿಳಿಸಿದೆ.

ಎರಡು ಗುಂಪಿನ ಎಲ್ಲ ನಾಯಕರು ಶಾಂತಿ ಅನುಸರಿಸುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರ ತ್ಯಜಿಸಲಿದ್ದಾರೆ ಎಂದು ಅಧಿಕಾರಿಗಳು ಕೂಡಾ ಮಾಹಿತಿ ನೀಡಿದ್ದಾರೆ. 1990ರ ದಶಕದ ಬಳಿಕ ಈ ಎರಡು ಗುಂಪುಗಳು ರಾಜ್ಯದಲ್ಲಿ ದಂಗೆ ಆರಂಭಿಸಿದ್ದವು. ಇದರಿಂದಾಗಿ ಸಾವಿರಾರು ಜನರು ಅದರಲ್ಲೂ ಬುಡಕಟ್ಟೇತರ ಜನರು ಸ್ಥಳಾಂತರಗೊಂಡಿದ್ದರು.

ಶಸ್ತ್ರಾಸ್ತ್ರ ತ್ಯಾಗ ಮಾಡಿ ಮುನ್ನೆಲೆಗೆ ಬರುವವರ ಪುನರ್ವಸತಿಗೆ ಕೇಂದ್ರ ಸರ್ಕಾರ ಈಗಾಗಲೇ 250 ಕೋಟಿ ರೂಪಾಯಿ ಮೊತ್ತದ ಆರ್ಥಿಕ ಪ್ಯಾಕೇಜ್​ ಘೋಷಿಸಿದೆ.

ಇದನ್ನೂ ಓದಿ: ಭಾರತಕ್ಕೆ ಯಾವ ದೇಶದಿಂದ ಅತಿಹೆಚ್ಚು ಜನರು ಪ್ರವಾಸ ಬರ್ತಾರೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.