ಗಂಗಾವತಿ(ಕೊಪ್ಪಳ): ತಾಲೂಕಿನ ಹೆಬ್ಬಾಳ ಕ್ಯಾಂಪ್ನಲ್ಲಿ ನಿಷೇಧಿತ ಕೋಳಿ ಪಂದ್ಯಾವಳಿ ನಡೆಸಿದ 9 ಜೂಜುಕೋರರನ್ನು ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೆಬ್ಬಾಳ ಕ್ಯಾಂಪ್ನಲ್ಲಿ ಆಂಧ್ರ ಮೂಲದಿಂದ ವಲಸೆ ಬಂದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಂಕ್ರಾಂತಿ ಸಂದರ್ಭದಲ್ಲಿ ಕೋಳಿ ಪಂದ್ಯಾವಳಿ ಆಡುವ ಸಂಪ್ರದಾಯವನ್ನ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದರು. ಆದರೆ, ಕೆಲ ವರ್ಷಗಳ ಹಿಂದೆ ಕೋಳಿ ಪಂದ್ಯಗಳನ್ನು ನಿಷೇಧಿಸಲಾಗಿತ್ತು. ತಾಲೂಕಿನ ಕೆಲ ಪ್ರಭಾವಿ ವ್ಯಕ್ತಿಗಳ ಬೆಂಬಲದಿಂದ ಹೆಬ್ಬಾಳ ಕ್ಯಾಂಪ್ನಲ್ಲಿ ಸಂಕ್ರಾಂತಿ ಹಬ್ಬದ ನಂತರವೂ ಕೋಳಿ ಪಂದ್ಯಾವಳಿ ಏರ್ಪಡಿಸಲಾಗಿತ್ತು ಎನ್ನಲಾಗ್ತಿದೆ.
ಓದಿ: ಉಳ್ಳಾಲದಲ್ಲಿ ಸಮುದ್ರದ ಅಲೆಗಳಿಗೆ ಸಿಲುಕಿ ಬೆಂಗಳೂರು ಮೂಲದ ಚಾಲಕ ಸಾವು
ಈ ವೇಳೆ ದಾಳಿ ನಡೆಸಿದ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು, 9 ಮಂದಿ ಜೂಜುಕೋರರು ಹಾಗೂ ಏಳು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.