ಗಂಗಾವತಿ (ಕೊಪ್ಪಳ): ಐತಿಹಾಸಿಕ ಧಾರ್ಮಿಕ ತಾಣ, ತಾಲೂಕಿನ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಆದಾಯ ಸಾರ್ವಕಾಲಿಕ ದಾಖಲೆ ಬರೆದಿದ್ದು, ಪ್ರಸಕ್ತ ಸಾಲಿನಲ್ಲಿ 17 ಲಕ್ಷ ರೂಪಾಯಿಗೂ ಹೆಚ್ಚಿನ ದೇಣಿಗೆ ಸಂಗ್ರಹವಾಗಿದೆ.
ದೇಗುಲದ ಆಡಳಿತಾಧಿಕಾರಿ ಹಾಗೂ ತಹಶೀಲ್ದಾರ್ ವರ್ಣಿತ್ ನೇಗಿ ನೇತೃತ್ವದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಅಕ್ಟೋಬರ್ 30 ರಿಂದ ಜನವರಿ 22ರ ವರೆಗೆ 17.21 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಕೊರೊನಾ ಬಳಿಕ ಇಷ್ಡು ದೊಡ್ಡ ಪ್ರಮಾಣದ ಹಣ ಸಂಗ್ರಹ ಆಗಿರುವುದು ಇದೇ ಮೊದಲು. ಇದರಲ್ಲಿ ಮೂರು ವಿದೇಶಿ ನಾಣ್ಯಗಳು ಸಿಕ್ಕಿವೆ.
ಓದಿ: ಜೋ ಬೈಡನ್ ಪದಗ್ರಹಣದಲ್ಲಿ ಭಾಗಿಯಾಗಿದ್ದ 200 ಭದ್ರತಾ ಸಿಬ್ಬಂದಿಗೆ ಕೊರೊನಾ!
ಇದಕ್ಕೂ ಮೊದಲು ಅಕ್ಟೋಬರ್ 29ರಂದು ನಡೆದಿದ್ದ ಎಣಿಕೆ ಕಾರ್ಯದಲ್ಲಿ 9.79 ರೂ. ಆದಾಯ ಸಂಗ್ರಹವಾಗಿತ್ತು.