ETV Bharat / state

ಆಂಧ್ರದಿಂದ ಆನೆಗೊಂದಿಗೆ ಬಂದಿದ್ದ ಇಬ್ಬರು ನಾಪತ್ತೆ: ಹೆಚ್ಚಿದ ಆತಂಕ - ಆಂಧ್ರದಿಂದ ಆನೆಗೊಂದಿಗೆ ಬಂದಿದ್ದ ಇಬ್ಬರು ನಿಗೂಢ ನಾಪತ್ತೆ

ಮೇ 15 ರಂದು ಆಂಧ್ರಪ್ರದೇಶದಿಂದ ಆನೆಗೊಂದಿಗೆ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆಮಾಡಿದೆ.

ಇಬ್ಬರು ನಾಪತ್ತೆ
ಇಬ್ಬರು ನಾಪತ್ತೆ
author img

By

Published : May 22, 2020, 5:06 PM IST

ಗಂಗಾವತಿ: ತಾಲೂಕಿನ ಆನೆಗೊಂದಿಗೆ ಆಂಧ್ರಪ್ರದೇಶದಿಂದ ಮೇ 15 ರಂದು ಬಂದಿದ್ದ ಇಬ್ಬರು ವ್ಯಕ್ತಿಗಳು ನಾಪತ್ತೆಯಾಗಿದ್ದು ಅಸಲಿಗೆ ಕ್ವಾರಂಟೈನ್​ಗೆ ಒಳಪಡಿಸಬೇಕಿದ್ದ ಈ ಇಬ್ಬರು ಈಗ ಎಲ್ಲಿಗೆ ಹೋಗಿದ್ದಾರೆ ಎಂಬ ಅಂಶ ಗ್ರಾಮದಲ್ಲಿ ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

ಮೇ 15 ರಂದು ಆಂಧ್ರದಿಂದ ಆನೆಗೊಂದಿಗೆ ಆಗಮಿಸಿದ್ದ ಈ ದಂಪತಿ ಮೂರು ದಿನ ಮನೆಯಲ್ಲಿಯೇ ಇದ್ದಾರೆ. ಬಳಿಕ ಈ ಮಾಹಿತಿ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಅಧಿಕಾರಿಗಳು ಅವರ ಮನೆಗೆ ಹೋಗಿ ವಿಚಾರಣೆ ಮಾಡಿದ್ದಾರೆ. ತಕ್ಷಣ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಬೇಕು ಎಂದು ತಾಕೀತು ಮಾಡಿದ್ದಾರೆ. ಆದ್ರೆ ಕ್ವಾರಂಟೈನ್​ಗೆ ಒಳಪಡಲು ಎರಡು ಗಂಟೆ ಸಮಯದ ಅವಕಾಶ ಕೇಳಿದ ಈ ಇಬ್ಬರು, ಬಳಿಕ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಎಲ್ಲಿಗೆ ಹೋಗಿದ್ದಾರೆ?, ಹೇಗೆ ಹೋಗಿದ್ದಾರೆ? ಎಂಬ ಯಾವ ಅಂಶಗಳನ್ನೂ ಅಧಿಕಾರಿಗಳು ಸಂಗ್ರಹಿಸುತ್ತಿಲ್ಲ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.