ಗಂಗಾವತಿ : ವಿವಾದಕ್ಕೀಡಾಗಿದ್ದ ಆಂಧ್ರಪ್ರದೇಶದ ಆನಂದಯ್ಯನ ಆಯುರ್ವೇದದ ಕೊರೊನಾ ಔಷಧಿ ಇದೀಗ ಗಂಗಾವತಿ ತಾಲೂಕಿನ ಆನೆಗೊಂದಿಗೆ ಕಾಲಿಟ್ಟಿದೆ. ಆಯುರ್ವೇದ ಹಾಗೂ ಆಯುಷ್ ಉತ್ಪನ್ನಗಳ ಬಗ್ಗೆ ಅಭಿಮಾನ ಮತ್ತು ಪ್ರಚಾರ ಮಾಡುವ ಹಂಪಿಯ ಹನುಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪೀಠಾಧಿಪತಿ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಆನೆಗೊಂದಿಯ ನೂರಾರು ಜನರಿಗೆ ಉಚಿತವಾಗಿ ಕೊರೊನಾ ಔಷಧಿ ವಿತರಿಸಿದರು.
ಆಂಧ್ರದಲ್ಲಿ ಆನಂದಯ್ಯನ ಗಿಡಮೂಲಿಕೆ ಔಷಧಿ ಖ್ಯಾತಿ ಪಡೆದಿದೆ. ಸಾವಿರಾರು ಜನರಿಗೆ ಉಚಿತವಾಗಿ ಆಯುರ್ವೇದ ಗಿಡಮೂಲಿಕೆಗಳ್ಳುಳ್ಳ ಕೊರೊನಾ ಔಷಧಿ ನೀಡುವ ಪ್ರಕರಣ ಕೋರ್ಟ್‌ಗೆ ಹೋಗಿ ಬಳಿಕ ಆಯುಷ್ ಇಲಾಖೆಯ ಗ್ರೀನ್ ಸಿಗ್ನಲ್ ನೀಡಿದ ಬಳಿಕ ಔಷಧಿ ಬೇಡಿಕೆ ಪ್ರಮಾಣ ಹೆಚ್ಚಾಗಿತ್ತು.
ತಾಲೂಕಿನ ನಾನಾ ಗ್ರಾಮಗಳಲ್ಲಿ ನೆಲೆಸಿರುವ ಆಂಧ್ರವಲಸಿಗರು ಆನಂದಯ್ಯನ ಔಷಧಿ ಪಡೆಯಲು ಆಂಧ್ರಕ್ಕೆ ತೆರಳುತ್ತಿದ್ದರು. ಇದೀಗ ಆನೆಗೊಂದಿಗೆ ಔಷಧಿ ಕಾಲಿಟ್ಟಿದೆ.