ಕುಷ್ಟಗಿ (ಕೊಪ್ಪಳ): ಎಸ್ಎಸ್ಎಲ್ಸಿ ಮರು ಮೌಲ್ಯಮಾಪನದಲ್ಲಿ ಕುಷ್ಟಗಿಯ ಕ್ರೈಸ್ತ ದಿ ಕಿಂಗ್ ಶಾಲೆಯ ವಿದ್ಯಾರ್ಥಿನಿ ಭೂಮೀಕಾ ವೀರೇಶ ಬಳ್ಳೋಳ್ಳಿ ಅವರಿಗೆ, ಗಣಿತ ವಿಷಯದಲ್ಲಿ 10, ವಿಜ್ಞಾನ ವಿಷಯದಲ್ಲಿ 8 ಅಂಕಗಳು ಲಭಿಸಿವೆ.
ಗಣಿತ ವಿಷಯದಲ್ಲಿ ಈ ಮೊದಲು 74 ಅಂಕಗಳು ಬಂದಿತ್ತು, ಮರು ಮೌಲ್ಯಮಾಪನದಲ್ಲಿ 10 ಅಂಕ ಬಂದಿದ್ದರಿಂದ ಒಟ್ಟು 84 ಅಂಕಗಳು ಬಂದಿವೆ. ವಿಜ್ಞಾನ ವಿಷಯದಲ್ಲಿ 85 ಅಂಕಗಳು ಬಂದಿತ್ತು, ಮರುಮೌಲ್ಯಮಾಪನದಿಂದ 93 ಅಂಕವಾಗಿದೆ. ಒಟ್ಟು 18 ಅಂಕ ಹೆಚ್ಚುವರಿಯಾಗಿ ಬಂದಿದೆ.