ETV Bharat / state

ಅಂಜನಾದ್ರಿ ಬೆಟ್ಟಕ್ಕೆ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಭೇಟಿ - ಹಂಪಿಯಲ್ಲಿ ಪ್ರವಾಸಿ ತಾಣಗಳ ವೀಕ್ಷಣೆ

ಲಲಿತ್ ಮಹಲ್​ನಲ್ಲಿ ವಾಸ್ತವ್ಯ ಹೂಡಿದ್ದ ಮಾನವೇಂದ್ರ ಸಿಂಗ್ ಬುಧವಾರ ಪತ್ನಿ ಮತ್ತು ಕುಟುಂಬ ಸಮೇತ ಅಂಜನಾದ್ರಿಗೆ ತೆರಳಿ ಪವನಸುತನ ದರ್ಶನ ಪಡೆದರು.

ಅಂಜನಾದ್ರಿ ಬೆಟ್ಟಕ್ಕೆ ಏರ್ ಮಾರ್ಷಲ್ ಮಾನವೇಂದ್ರ ಸಿಂಗ್ ಭೇಟಿ
air-marshal-manvendra-singh-visit-to-anjanadri-hill
author img

By

Published : Nov 2, 2022, 11:01 AM IST

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲೂಕಿನ ಚಿಕ್ಕರಾಂಪೂರದಲ್ಲಿರುವ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿ ದೇಗುಲಕ್ಕೆ ಭಾರತೀಯ ವಾಯುದಳದ ಮುಖ್ಯಸ್ಥ (ಏರ್ ಮಾರ್ಷಲ್) ಮಾನವೇಂದ್ರ ಸಿಂಗ್ ಕುಟುಂಬ ಸಮೇತ ಭೇಟಿ ನೀಡಿ ದರ್ಶನ ಪಡೆದರು.

ಹಂಪಿ ಪ್ರವಾಸಕ್ಕೆ ಆಗಮಿಸಿದ್ದ ಅವರು, ಕಳೆದ ಎರಡು ದಿನಗಳಿಂದ ಹಂಪಿಯಲ್ಲಿ ಪ್ರವಾಸಿ ತಾಣಗಳ ವೀಕ್ಷಣೆ ಮಾಡಿದ್ದರು. ಬಳಿಕ ನಗರದ ಹೊರವಲಯದಲ್ಲಿರುವ ಲಲಿತ್ ಮಹಲ್​ನಲ್ಲಿ ವಾಸ್ತವ್ಯ ಹೂಡಿದ್ದ ಮಾನವೇಂದ್ರ ಸಿಂಗ್ ಬುಧವಾರ ಪತ್ನಿ ಮತ್ತು ಕುಟುಂಬ ಸಮೇತ ಅಂಜನಾದ್ರಿಗೆ ತೆರಳಿ ಪವನಸುತನ ದರ್ಶನ ಪಡೆದರು.

582 ಮೆಟ್ಟಿಲುಗಳನ್ನು ಹತ್ತುವ ಮೂಲಕ ಬೆಟ್ಟ ಏರಿದ ಮಾರ್ಷಲ್ ಕುಟುಂಬ, ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿತು. ವಾಯುದಳದ ಮುಖ್ಯಸ್ಥನಿಗೆ ದೇಗುಲದಿಂದ ಶೇಷವಸ್ತ್ರ ಹೊದಿಸಿ ಗೌರವಿಸಲಾಯಿತು.

ಇದನ್ನೂ ಓದಿ: ಶಿವ 143 ಸಿನಿಮಾ ಪ್ರಚಾರ..ಮಾವ ಪುನೀತ್ ಮೆಚ್ಚಿನ ಅಂಜನಾದ್ರಿ ದೇಗುಲಕ್ಕೆ ಅಳಿಯ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.