ಕುಷ್ಟಗಿ(ಕೊಪ್ಪಳ) : ತಾಲೂಕಿನ ಕಳಮಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣದ ಕೆಲಸದಲ್ಲಿ ನಿರತರಾಗಿದ್ದ ಕೂಲಿಕಾರ ಮಹಿಳೆಯ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ.
ಕಳೆದ ಬುಧವಾರ ಬೆಳಗ್ಗೆ ಕಳಮಳ್ಳಿ ಸೀಮಾದ ಜಮೀನಿನಲ್ಲಿ ಬದು ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದ ಗುರುಪಾದಮ್ಮ ಕುಂಬಾರ (45) ಇದ್ದಕ್ಕಿದ್ದಂತೆ ಕುಸಿದು ಬಿದ್ದು ಅಸ್ವಸ್ಥಗೊಂಡು ಅಲ್ಲಿಯೇ ಸಾವನ್ನಪ್ಪಿದ್ದಾರೆ. ಆಕೆಗೆ ಹೃದಯಾಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಸದ್ಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮೃತ ಮಹಿಳೆಗೆ ಪರಿಹಾರವಾಗಿ 75 ಸಾವಿರ ರೂ. ನೀಡಲಾಗುವುದು ಎಂದು ನರೇಗಾ ಯೋಜನೆ ಸಹಾಯಕ ನಿರ್ದೇಶಕ ಅರುಣ್‌ಕುಮಾರ್ ದಳವಾಯಿ ಮಾಹಿತಿ ನೀಡಿದರು.