ಗಂಗಾವತಿ: ಜಯನಗರದ ಮೆಟ್ರಿಕ್ ನಂತರದ ಎಸ್ಟಿ ಹಾಸ್ಟೆಲ್ನಲ್ಲಿ ಏಕಕಾಲಕ್ಕೆ 10 ಮಕ್ಕಳಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಇಂದು ಅಧಿಕಾರಿಗಳು, ಮುಂಜಾಗ್ರತಾ ಕ್ರಮವಾಗಿ ವಸತಿ ಗೃಹಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಸಹಾಯಕ ಆಯುಕ್ತ ನಾರಾಯಣ ಕನಕರೆಡ್ಡಿ ಹಾಗೂ ನಗರಸಭೆಯ ಕಮಿಷನರ್ ಅರವಿಂದ್ ಜಮಖಂಡಿ ಹೆಣ್ಣುಮಕ್ಕಳ ವಸತಿ ನಿಲಯಕ್ಕೆ ಭೇಟಿ ನೀಡಿ, ಮುಂಜಾಗ್ರತೆಯಾಗಿ ಕೈಗೊಂಡ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು. ವಸತಿ ನಿಲಯಗಳಲ್ಲಿ ಕಡ್ಡಾಯವಾಗಿ ಮಕ್ಕಳಿಗೆ ಮಾಸ್ಕ್ ಹಾಕುವುದು, ಸ್ಯಾನಿಟೈಸರ್ ಬಳಸುವುದು ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಹಾಯಕ ಆಯುಕ್ತರು ನಿರ್ದೇಶನ ನೀಡಿದರು.
ಓದಿ:ವಸತಿ ನಿಲಯದ 10 ಮಕ್ಕಳಿಗೆ ಕೊರೊನಾ.. ಆತಂಕದಲ್ಲಿ ಗಂಗಾವತಿ ಜನತೆ
ಅಲ್ಲದೇ ವಸತಿ ನಿಲಯದ ಸುತ್ತಲೂ ಫಾಗಿಂಗ್ ಮಾಡಿಸುವುದು, ಸ್ವಚ್ಛತೆ ಕಾಪಾಡುವುದು, ನಿಯಮಿತವಾಗಿ ಭೇಟಿ ನೀಡಿ ಮಕ್ಕಳ ಕುಂದುಕೊರತೆ ಆಲಿಸುವಂತೆ ಪೌರಾಯುಕ್ತರಿಗೆ ಸಹಾಯಕ ಆಯುಕ್ತರು ಸೂಚನೆ ನೀಡಿದರು. ಇದೇ ಸಂದರ್ಭದಲ್ಲಿ ಬಾಲಕರ ವಸತಿ ನಿಲಯಕ್ಕೂ ನಗರಸಭೆಯಿಂದ ಸ್ಯಾನಿಟೈಸ್ ಮಾಡಲಾಯಿತು.